ಬೆಂಗಳೂರು:ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಸಿನಿಮಾರಂಗಕ್ಕೆ ಬರ್ತಾನೆ ಅನ್ನೋ ಸುದ್ದಿ ಬಹು ದಿನಗಳಿಂದಲೂ ಕೇಳಿ ಬರ್ತಾನೇ ಇತ್ತು.ಅದರಂತೆ ಬನಾರಸ್ ಹೆಸರಿನಲ್ಲಿಯೇ ಒಂದು ಸಿನಿಮಾನೂ ಸೆಟ್ಟೇರಿತ್ತು. ಆದರೆ ಅದು ಮುಂದೇನಾಯ್ತು ಅನ್ನೋ ಹೊತ್ತಿಗೆ ಚಿತ್ರದ ನಿರ್ದೇಶಕ ಜಯತೀರ್ಥ ಈಗ ಆ ಚಿತ್ರ ಫಸ್ಟ್ ಲುಕ್ ಹೊರ ಬಿಟ್ಟಿದ್ದಾರೆ. ಇದು ಈಗಲೇ ವಿಭಿನ್ನವಾಗಿಯೇ ಕಾಣಿಸುತ್ತಿದೆ. ನೋಡಿ.
ಜಮೀರ್ ಅಹ್ಮದ್ ಖಾನ್ ಪುತ್ರನ ಈ ಚಿತ್ರವನ್ನ ಬನಾರಸ್ ನಲ್ಲಿಯೇ ಚಿತ್ರೀಕರಿಸಲಾಗಿದೆ. ಅತ್ಯದ್ಭುತ ತಾಣಗಳಲ್ಲಿಯೇ ಈ ಚಿತ್ರವನ್ನ ಸೆರೆಹಿಡಿಯಲಾಗಿದೆ. ಛಾಯಾಗ್ರಾಹ ಅದ್ವೈತ ಗುರುಮೂರ್ತಿ ಕ್ಯಾಮೆರಾ ಕಣ್ಣಲ್ಲಿ ಇಡೀ ಚಿತ್ರ ಹೊಸ ಭರವಸೆ ಮೂಡಿಸುತ್ತಿದೆ.ಸೋನಲ್ ಮೊಂಥೆರೋ ಇಲ್ಲಿ ಝೈದ್ ಖಾನ್ ಗೆ ಜೋಡಿ ಆಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ.ಸದ್ಯ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಪ್ರಾಮಿಸಿಂಗ್ ಆಗಿಯೇ ಕಾಣುತ್ತಿದೆ.
PublicNext
17/11/2021 12:17 pm