ಮುಂಬೈ:ಬಾಲಿವುಡ್ ನ ತಾರೆ ಜಮೀನ್ ಪರ್ ಚಿತ್ರ ಖ್ಯಾತಿಯ ಬಾಲ ನಟ ದರ್ಶಿಲ್ ಸಫಾರಿ ಈಗ ಹೇಗಿದ್ದಾನೆ. ಈತನ ಲುಕ್ ಈಗ ಹೇಗೆ ಆಗಿರಬಹುದು. ಈ ಎಲ್ಲ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಕಾರಣ, ದರ್ಶಿಲ್ ಸಖತ್ ಹ್ಯಾಂಡ್ಸಮ್ ಆಗಿ ಕಾಣುವ ಒಂದಷ್ಟು ಫೋಟೋಗಳು ಈಗ ವೈರಲ್ ಆಗುತ್ತಿವೆ.
ದರ್ಶಿಲ್ ಸಫಾರಿ ಬಾಲಿವುಡ್ ನಲ್ಲಿ ತಾರೆ ಜಮೀನ್ ಪರ್ ಚಿತ್ರದ ಮೂಲಕವೇ ಗುರುತಿಸಿಕೊಂಡಿದ್ದಾನೆ. ಅದರಂತೆ ಈ ಚಿತ್ರ ಆದ್ಮೇಲೆ ದರ್ಶಿಲ್ ಆಗಾಗ ಕೆಲವು ಚಿತ್ರಗಳಲ್ಲೂ,ಟಿವಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾನೆ.ಆದರೆ ಈಗ ಇದೇ ದರ್ಶಿಲ್ ಭಾರಿ ಹ್ಯಾಂಡ್ಸಮ್ ಆಗಿದ್ದಾನೆ. ನೆಟ್ಟಿಗರು ಈತನನ್ನ ನಿಕ್ ಜೋನ್ಸ್ ಗೂ ಹೊಲಿಸುತ್ತಿದ್ದಾರೆ.
ಅಂದ್ಹಾಗೆ ದರ್ಶಿಲ್ ಈಗ ಪ್ಯಾರ್ ನಾಳ್ ಹೆಸರಿನ ಆಲ್ಬಂ ಸಾಂಗ್ ನಲ್ಲೂ ಕಾಣಿಸಿಕೊಂಡಿದ್ದಾನೆ. ಟಿವಿ ಶೋಗಳಲ್ಲಿ ಕೆಲವು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾನೆ ಅನ್ನೋ ಸುದ್ದಿ ಇದೆ. ಇಷ್ಟು ಬಿಟ್ಟರೆ ದರ್ಶಿಲ್ ಈಗ ಸೂಪರ್ ಆಗಿಯೇ ಕಾಣ್ತಿದ್ದಾನೆ.
PublicNext
09/11/2021 10:20 pm