ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ ಕುಟುಂಬಕ್ಕೆ ಸಾಂತ್ವನ ಹೇಳೋಕೆ ಮುಂದಿನ ವಾರ ಬರ್ತಾರೆ ರಜನಿಕಾಂತ್

ಬೆಂಗಳೂರು:ಪುನೀತ್ ಸಾವಿನ ಸುದ್ದಿ ಕೇಳಿ ರಜನೀಕಾಂತ್ ಮಮ್ಮಲ ಮರುಗಿದ್ದಾರೆ. ಮುಂದಿನ ವಾರ ಬೆಂಗಳೂರಿಗೆ ಬಂದು ರಾಜ್ ಕುಟುಂಬಕ್ಕೆ ಸಾಂತ್ವನವನ್ನೂ ಹೇಳಲಿದ್ದಾರೆ ರಜನಿಕಾಂತ್.

ರಜನಿಕಾಂತ್ ಶಸ್ತ್ರಚಿಕಿತ್ಸೆಗಾಗಿಯೇ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೊನ್ನೆ ತಾನೇ ಮನೆಗೂ ಬಂದಿದ್ದರು. ಈ ನಡುವೇನೆ ಕರ್ನಾಟಕದಲ್ಲಿ ಪುನೀತ್ ಮನೆಯವರೆಗೆ ಸಾಂತ್ವನ ಹೇಳಲು ಎಲ್ಲರೂ ಬಂದು ಹೋದರು.ಆದರೆ ಕರ್ನಾಟಕದ ರಜನಿಕಾಂತ್ ಯಾಕೆ ಬರಲಿಲ್ಲ ಅಂತಲೇ ಅನೇಕ ಕೇಳುತ್ತಿದ್ದರು.

ಈ ಮಾತಿನ ಹಿನ್ನೆಲೆಯಲ್ಲಿಯೋ ಏನೋ ರಜನಿಕಾಂತ್ ಮುಂದಿನವಾರ ರಾಜ್ ಕುಂಟಬದ ಸದಸ್ಯರಿಗೆ ಸಾಂತ್ವನ ಹೇಳಲು ಬರುತ್ತಿದ್ದಾರೆ. ಪುನೀತ್ ಸಾವಿನ ಸುದ್ದಿ ಕೇಳಿ ರಜನಿಕಾಂತ್ ಬೇಸರಪಟ್ಟುಕೊಂಡಿದ್ದಾರೆ. ಮುಂದಿನ ವಾರ ರಜನಿಕಾಂತ್ ಬಂದೇ ಬರುತ್ತಾರೆ ಎಂದು ರಜನಿಕಾಂತ್ ಗೆಳೆಯ ರಾಜಹಬದ್ದೂರ್ ಈಗ ಹೇಳಿದ್ದಾರೆ.

ಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ರಾಜಬಹದ್ದೂರ್,ರಜನಿ ಬರುವಿಕೆಯ ವಿಷಯವನ್ನ ಹೇಳಿಕೊಂಡಿದ್ದಾರೆ.

Edited By :
PublicNext

PublicNext

04/11/2021 11:19 am

Cinque Terre

49.49 K

Cinque Terre

0