ಕುಂದಾಪುರ: ಅಗಲಿದ ಅಪ್ಪು ಗೆ ರಾಜ್ಯಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರದ ಈ ತದ್ರೂಪು ಅಪ್ಪು ಅಭಿಮಾನಿ ಥೇಟು ಅಪ್ಪುವನ್ನು ಹೋಲುತ್ತಾನೆ.ಈತ ಗ್ಯಾರೇಜಿನಲ್ಲಿ ಕೆಲಸ ಮಾಡುವ ಹುಡುಗ.ಪುನೀತ್ ರಾಜಕುಮಾರ್ ಬಗ್ಗೆ ಇವನಿಗೆ ವಿಶೇಷ ಅಭಿಮಾನ.
ನೋಡಲು ಪುನೀತ್ ರಾಜಕುಮಾರ್ ರೀತಿ ಕಾಣುವ ಈ ಯುವಕನ ಹೆಸರು ಪ್ರವೀಣ್. ಪುನೀತ್ ರೀತಿಯಲ್ಲೇ ಉಡುಗೆ-ತೊಡುಗೆ ತೊಟ್ಟುಕೊಳ್ಳುತ್ತಾನೆ.ಟಿಕ್ ಟಾಕ್ ಅಪ್ಲಿಕೇಶನಿನ್ನಲ್ಲಿ ಪುನೀತ್ ರೀತಿಯಲ್ಲೇ ಮಿಮಿಕ್ರಿ ಮಾಡಿ ಫೇಮಸ್ ಆಗಿರುವ ಪ್ರವೀಣ್,ಕುಂದಾಪುರ ಪರಿಸರದಲ್ಲಿ ಜೂನಿಯರ್ ಪುನೀತ್ ರಾಜಕುಮಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾನೆ.
ಆದರೆ ಪುನೀತ್ ರಾಜಕುಮಾರ್ ಅಕಾಲಿಕ ಸಾವಿನಿಂದ ಪ್ರವೀಣ್ ತೀವ್ರವಾಗಿ ನೊಂದುಕೊಂಡಿದ್ದಾನೆ. ಮೂಲತಃ ತೀರ್ಥಹಳ್ಳಿಯ ನಿವಾಸಿಯಾಗಿರುವ ಪ್ರವೀಣ್ ಆಚಾರ್ಯ ಈಗ ಸಾಸ್ತಾನದಲ್ಲಿ ಗ್ಯಾರೇಜು ನಡೆಸುತ್ತಿದ್ದಾನೆ. ಸದ್ಯ ಇವನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಪ್ಪು ಅಭಿಮಾನಿಗಳು ರಾಶಿ ಬೀಳುತ್ತಿರುವುದು ಲೇಟೆಸ್ಟ್ ನ್ಯೂಸ್ !
PublicNext
03/11/2021 09:12 pm