ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರ ಸಾವಿಗೂ ಮುಂಚಿನ ಕೊನೆ ನಿಮಿಷಗಳ ಸಿಸಿಟಿವಿ ಲಭ್ಯವಾಗಿದೆ. ಎದೆ ನೋವು ಕಾಣಿಸಿಕೊಂಡ ನಂತರ ಮನೆಯಿಂದ ಹೊರಬಂದ ಪುನೀತ್ ತಮ್ಮ ಅಂಗರಕ್ಷಕ ಛಲಪತಿ ಅವರಿಗೆ ಮನೆಯಲ್ಲೇ ಇರುವಂತೆ ಹೇಳಿದ್ದಾರೆ. ಕೆಲವು ಕ್ಷಣ ಕಾರಿನ ಪಕ್ಕದಲ್ಲಿ ನಿಂತಿದ್ದ ಅವರು ನಂತರ ಮನೆ ಗೇಟ್‌ನಿಂದ ಹೊರ ಹೋಗಿ ಕಾರು ಹತ್ತಿದ್ದಾರೆ. ಮತ್ತು ಅಲ್ಲಿಂದ ಆಸ್ಪತ್ರೆಗೆ ತೆರಳಿದ್ದಾರೆ.
ಅಕ್ಟೋಬರ್ 29 ಬೆಳಗ್ಗೆ 11 ಗಂಟೆ 1 ನಿಮಿಷಕ್ಕೆ ಆಸ್ಪತ್ರೆಗೆ ತೆರಳಿದ್ದ ಪುನೀತ್ ಜೊತೆಗೆ ಪತ್ನಿ ಅಶ್ವಿನಿ ಕೂಡ ಇದ್ದರು. ಮೊದಲಿಗೆ ಡಾ.ರಮಣರಾವ್ ಕ್ಲೀನಿಕ್‌ಗೆ ಪುನೀತ್ ರಾಜ್‌ಕುಮಾರ್ ಹೋಗಿದ್ದರು. ಮನೆಯಿಂದ ಹೊರಡುವಾಗ ಆರಾಮಾಗಿ ನಡೆದುಕೊಂಡು ಆರೋಗ್ಯವಾಗಿಯೇ ಇದ್ದ ಪುನೀತ್ ರಾಜ್‌ಕುಮಾರ್ ನಂತರ ಕನ್ನಡ ನಾಡನ್ನು ಬಿಟ್ಟು ಅಗಲಿದ್ದಾರೆ.
PublicNext
02/11/2021 03:11 pm