ಬೆಂಗಳೂರು: ನಮ್ಮೆಲ್ಲೆರ ಮೆಚ್ಚಿನ ಅರಸು, ಆಕಾಶ ಹಾಗೂ ಪೃಥ್ವಿಯಲ್ಲಿ ಲೀನವಾಗಿದ್ದಾರೆ. ಪುನೀತ್ ಭೌತಿಕವಾಗಿ ನಮ್ಮಿಂದ ದೂರವಾಗಿ ಇಂದಿಗೆ 5 ದಿನವಾಗಿದೆ . ಈ ಹಿನ್ನೆಲೆಯಲ್ಲಿ ಇಂದು ಪುನೀತ್ ರಾಜಕುಮಾರ್ ಸಮಾಧಿಗೆ ಹಾಲು-ತುಪ್ಪ ಕಾರ್ಯ 11.30 ಕ್ಕೆ ನಡೆಯಲಿದ್ದು , ಸಮಾಧಿಯನ್ನು ಸಕಲ ಪುಷ್ಪ ರಾಶಿಗಳಿಂದ ಅಲಂಕಾರ ಮಾಡಲಾಗಿದೆ.
ಸಮಾಧಿ ಮುಂದೆ ಎಳನೀರು, ದ್ರಾಕ್ಷಿ, ದಾಳಿಂಬೆ, ತೆಂಗಿನಕಾಯಿ ನೈವೇದ್ಯಕ್ಕೆ ಇಡಲಾಗಿದೆ. ಬಿಳಿ , ಹಳದಿ ಬಣ್ಣದ ಹೂಗಳಿಂದ ಸಮಾಧಿ ಪೂರ್ತಿ ಮಂಟಪದ ರೀತಿ ಅಲಂಕಾರ ಮಾಡಲಾಗಿದೆ. ದೊಡ್ಮನೆ ಕುಟುಂಬಸ್ಥರು , ಚಿತ್ರರಂಗದ ಆಪ್ತರು , ಅಪ್ಪು ಸ್ನೇಹಿತರು ಹಾಲು ತುಪ್ಪ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.
PublicNext
02/11/2021 10:54 am