ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೃಥ್ವಿಯೊಳಗೆ ಮಣ್ಣಾದ ಪರಮಾತ್ಮ : ಮುಗಿಲು ಮುಟ್ಟಿದೆ ಕೋಟ್ಯಾಂತರ ಅಭಿಮಾನಿಗಳ ಆಕ್ರಂದನ

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ನಡೆಯಿತು. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.

ನಟ ಪುನೀತ್ ಅಕ್ಟೋಬರ್ 29ರಂದು ಹೃದಯಾಘಾತದಿಂದ ಅಕಾಲಿಕವಾಗಿ ಇಹಲೋಕ ತ್ಯಜಿಸಿದರು. ಪುನೀತ್ ನಿಧನಕ್ಕೆ ನಾಡು ಕಂಬನಿ ಮಿಡಿದಿದೆ.

ಗುಂಡಿಗೆ ಇಳಿಸಿ ಪುನೀತ್ ದೇಹವನ್ನು ಉಪ್ಪು ಬಳಸಿ ಸಂಪೂರ್ಣ ಮುಚ್ಚಲಾಗಿದೆ. ಇನ್ನು ಅಪ್ಪು ಮಣ್ಣಲ್ಲಿ ಮಣ್ಣಾಗುತ್ತಿದ್ದಂತೆ ಡಾ.ರಾಜ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸಿಎಂ ಸೇರಿದಂತೆ ಗಣ್ಯರಿಂದ ಅಂತಿಮ ದರ್ಶನ.ಕುಟುಂಬಸ್ಥರಿಂದ ಅಂತಿಮ ವಿಧಿವಿಧಾನ ನಡೆಯಿತು. ಕೊನೆಯ ಬಾರಿ ಪುನೀತ್ ಮುಖ ನೋಡುತ್ತಿರುವ ಕುಟುಂಬಸ್ಥರು, ಪತ್ನಿ ಅಶ್ವಿನಿ ಹಾಗೂ ಮಕ್ಕಳು ಬಿಕ್ಕಿ-ಬಿಕ್ಕಿ ಅಳುತ್ತಿರುವ ದೃಶ್ಯ ಕರುಳು ಹಿಂಡುವಂತಿವೆ.

Edited By : Manjunath H D
PublicNext

PublicNext

31/10/2021 09:08 am

Cinque Terre

64.82 K

Cinque Terre

3