ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿಗೆ ಬಂದಿಳಿದ ಪುನೀತ್ ರಾಜ್‌ಕುಮಾರ್‌ ಪುತ್ರಿ ಧೃತಿ

ನವದೆಹಲಿ: ಪವರ್ ​​ಸ್ಟಾರ್ ಪುನೀತ್ ರಾಜ್​ಕುಮಾರ್​ ಅವರ ಪುತ್ರಿ ಧೃತಿ ನ್ಯೂಯಾರ್ಕ್​​ನಿಂದ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇನ್ನೇನು ಕೆಲವೇ ಹೊತ್ತಿನಲ್ಲಿ ಬೆಂಗಳೂರಿನತ್ತ ಹೊರಡಲಿದ್ದಾರೆ.

AI 102 ಏರ್ ಇಂಡಿಯಾ ವಿಮಾನದ ಮೂಲಕ ದೆಹಲಿಗೆ ಬಂದಿಳಿದ ಧೃತಿ ಅವರಿಗೆ ಎಮಿಗ್ರೇಷನ್ ಕ್ಲಿಯರೆನ್ಸ್, ಭದ್ರತೆ ತಪಾಸಣೆ ಸೇರಿ ಹಲವು ಕೆಲಸಗಳಲ್ಲಿ ಕರ್ನಾಟಕ ಭವನದ ಸಿಬ್ಬಂದಿ ಸಹಕಾರಿಯಾಯಿತು.

ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣ ಆರಂಭಿಸಿರುವ ಧೃತಿ ಅವರು ಸಂಜೆ 4:15ರ ಸುಮಾರಿಗೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿಂದ ನೇರವಾಗಿ ತಂದೆಯ ಪಾರ್ಥಿವ ಶರೀರ ನೋಡಲು ಧೃತಿ ಕಂಠೀರವ ಸ್ಟೇಡಿಯಂಗೆ ಬರಲಿದ್ದಾರೆ. ತಂದೆಗೆ ಅಂತಿಮ ನಮನ ಸಲ್ಲಿಸಿ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಲಿದ್ದಾರೆ.

Edited By : Vijay Kumar
PublicNext

PublicNext

30/10/2021 01:45 pm

Cinque Terre

87.28 K

Cinque Terre

0