ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿನ್ನೆ ರಾತ್ರಿಯಷ್ಟೇ ಗುರುಕಿರಣ್ ಬರ್ತ್‌ಡೇ ಸಂಭ್ರಮದಲ್ಲಿ ಹಾಡಿ ನಕ್ಕು ನಲಿದಿದ್ದ ಅಪ್ಪು

ಬೆಂಗಳೂರು: ಇಂದು ಮಧ್ಯಾಹ್ನ ಬರಸಿಡಿಲಿನಂತೆ ಬಡಿದ ಪುನೀತ್ ರಾಜ್‌ಕುಮಾರ್ ಅವರ ನಿಧನವಾರ್ತೆಯಿಂದ ಇಡೀ ಕರುನಾಡೇ ಸ್ತಬ್ಧವಾಗಿದೆ.

ನಿನ್ನೆ (ಅಕ್ಟೋಬರ್ 28) ಗುರುಕಿರಣ್ ಅವರ ಹುಟ್ಟುಹಬ್ಬ. ಗುರುಕಿರಣ್ ಅವರ ಬರ್ತ್‌ಡೇ ಸೆಲೆಬ್ರೇಷನ್ ನಿನ್ನೆ ಸಂಜೆ ನಡೆದಿತ್ತು. ಗುರುಕಿರಣ್ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಸಂಸದೆ, ನಟಿ ಸುಮಲತಾ ಅಂಬರೀಶ್, ಗೋಲ್ಡನ್ ಸ್ಟಾರ್ ಗಣೇಶ್, ಪುನೀತ್ ರಾಜ್‌ಕುಮಾರ್ ಕೂಡ ಪಾಲ್ಗೊಂಡಿದ್ದರು.

ಪುನೀತ್ ಅವರು ಗುರುಕಿರಣ್‌ಗೆ ಶುಭ ಹಾರೈಸಿ, ಕೆಲ ಕಾಲ ಅವರೊಟ್ಟಿಗೆ ಮಾತನಾಡಿದ್ದರು. ಅಷ್ಟೇ ಅಲ್ಲದೆ ಹಾಡು ಹಾಡಿ ನಕ್ಕು ನಲಿದಿದ್ದರು. ಹೀಗಿರುವಾಗ ಇಂದು ಮಧ್ಯಾಹ್ನ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಆಘಾತ ಉಂಟು ಮಾಡಿದೆ.

Edited By : Shivu K
PublicNext

PublicNext

29/10/2021 09:20 pm

Cinque Terre

185.65 K

Cinque Terre

17