ಬೆಂಗಳೂರು: ಪುನೀತ್ ರಾಜಕುಮಾರ್ ಅಗಲಿ ಈಗ ಒಂದಷ್ಟು ಗಂಟೆಗಳು ಕಳೆದಿವೆ. ಆದರೆ ಪುನೀತ್ ಎಲ್ಲರ ಹೃದಯದಲ್ಲೂ ಮನೆ ಮಾಡಿದ್ದಾರೆ ಎಂದು ಹೇಳೋದಕ್ಕೆ ಹೆಚ್ಚು ಹೊತ್ತು ಬೇಕಾಗಿಯೇ ಇಲ್ಲ. ಇಡೀ ನಾಡಿನ ಜನತೆ ಪುನೀತ್ ಸಾವಿಗೆ ಮರುಗಿದೆ. ಪುನೀತ್ ಸಾವಿಗೆ ಸಂಕಟಪಟ್ಟಿದೆ.ಪುನೀತ್ ಸಾವಿಗೆ ವಾಟ್ಸ್ ಅಪ್ ಮೂಲಕ ಟ್ವೀಟರ್ ಮೂಲಕ ಸಂತಾಪ ಸೂಚಿಸಿದೆ. ಇಲ್ಲಿದೆ ಅದರ ಇತರ ಡಿಟೈಲ್ಸ್.
ಪುನೀತ್ ಅಕಾಲಿಕ ಸಾವು ಕನ್ನಡ ಸಿನಿ ಪ್ರೇಮಗಳ ಹೃದಯದಲ್ಲಿ ಅತಿ ದೊಡ್ಡ ಆಘಾತ ಮಾಡಿದೆ. ಇದರಿಂದ ದು:ಖತಪ್ತ ಜನ ತಮ್ಮದೇ ರೀತಿಯಲ್ಲಿ ನೋವು ತೋಡಿಕೊಂಡಿದ್ದಾರೆ. ಟ್ವಿಟರ್ ಅನ್ನ ಓಪನ್ ಮಾಡಿದರೇ ಸಾಕು. ಅಲ್ಲಿ ನಿಮ್ಗೆ ಪುನೀತ್ ಕಾಣಿಸುತ್ತಾರೆ.ಅಭಿಮಾನಿಯ ನೋವಿನ ನುಡಿಗಳು ಅಲ್ಲಿ ಕಾಣುತ್ತವೆ.
ಪುನೀತ್ ಅಭಿಮಾನಿಗಳು ಎಲ್ಲೆಡೆ ಇದ್ದಾರೆ. ಅವರ ಇವತ್ತಿನ ವಾಟ್ಸ್ ಅಪ್ DP ನೋಡಿದರೆ ನಿಜಕ್ಕೂ ಹೃದಯ ಕಲಕುತ್ತದೆ. ಕಾರಣ, ಅಲ್ಲಿಯೂ ನಗು ಮೊಗದ ಪುನೀತ್ ಕಾಣುತ್ತಿದ್ದಾರೆ. ಪುನೀತ್ ಕೇವಲ ತೆರೆ ಮೇಲೆ ಅಲ್ಲ. ಪ್ರತಿಯೊಬ್ಬ ಸಿನಿಪ್ರೇಮಿಗಳ ಮನದಲ್ಲೂ ಇದ್ದಾರೆ. ಪುನೀತ್ ಮೇಲಿನ ಇವರ ಈ ಅಪಾರ ಪ್ರೀತಿ ಅಪ್ಪು ಸಾವು ನ್ಯಾಯವೇ ಅಂತ ಕೇಳುವಂತೆ ಮಾಡಿದೆ.
PublicNext
29/10/2021 06:09 pm