ಬೆಂಗಳೂರು: ಇಲ್ಲೊಬ್ಬ ಕಳ್ಳ ತನ್ನ ಸಾಕು ಪಾರಿವಾಳಗಳನ್ನ ಕಳ್ಳತನಕ್ಕೆ ಬಳಸಿಕೊಂಡು ಡುಪ್ಲೆಕ್ಸ್ ಮನೆಗೆಳನ್ನೇ ದೋಚಿದ್ದಾನೆ. ಆದರೆ ಈತ ಈಗ ಸಿಕ್ಕಿಬಿದ್ದಿದ್ದಾನೆ.ಪೊಲೀಸರು ಈತನಿಂದ ಈಗ ಲಕ್ಷ ಲಕ್ಷ ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಕಳ್ಳನ ಹೆಸರು ಬ್ಯಾಡ್ ನಾಗು ಅಲಿಯಾಸ್ ನಾಗೇಂದ್ರ ಜಿ. ಈತ ಮೂರು ಮನೆಗಳಲ್ಲಿ ಕಳ್ಳತನ ಮಾಡಿದ್ದಾನೆ.ಇಟ್ಟುಮಡು ನಿವಾಸಿ ಸೂರ್ಯನಾರಾಯಣ ರೆಡ್ಡಿ ಕೊಟ್ಟ ದೂರಿನ ಆಧಾರ ಮೇಲೆ ಚನ್ನಮ್ಮನಕೆರೆ ಪೊಲೀಸರು ಈ ಬ್ಯಾಡ್ ನಾಗನನ್ನ ಬಂಧಿಸಿದ್ದಾರೆ. ಈತ ಕಳ್ಳತನ ಮಾಡೋಕೆ ಪಾರಿವಾಳಗಳನ್ನ ಮೊದಲು ಡುಪ್ಲೆಕ್ಸ್ ಮನೆ ಮೇಲೆ ಹಾಡಿ ಬಿಡುತ್ತಿದ್ದ. ಪಾರಿವಾಳಗಳು ಮನೆ ಮೇಲೆ ಹೋದಾಕ್ಷಣ, ಈತ ಪಾರಿವಾಳಗಳು ಮನೆ ಮೇಲೆ ಬಂದಿವೆ ಅಂತ ಹೇಳಿಕೊಂಡು ಮಾಳಿಗೆ ಮೇಲೆ ಹೋಗುತ್ತಿದ್ದ.ಹಾಗೆ ಹೋಗುವಾಗಲೇ ಇಡೀ ಮನೆಯಲ್ಲಿ ಏನ್ನೆಲ್ಲ ಇದೆ ಅಂತ ನೋಡಿಕೊಳ್ಳುತ್ತಿದ್ದ.ಯಾರೂ ಇಲ್ಲದೇ ಇರೋದನ್ನ ನೋಡಿಕೊಂಡು ರಾತ್ರಿ ವೇಳೆ ಮನೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಹಾಗೆ ಮೂರು ಮನೆಗಳಲ್ಲಿ ಕಳ್ಳತನ ಮಾಡಿದ್ದಾನೆ.ಬಂಧಿಸಿದ ಪೊಲೀಸರು ಈತನಿಂದ ಈ 4 ಲಕ್ಷ 4000 ಸಾವಿರ ರೂಪಾಯಿ ಹಾಗೂ 106 ಗ್ರಾಮ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
PublicNext
20/10/2021 06:36 pm