ಹೈದರಾಬಾದ್: ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ವಿಚಾರ ಅಭಿಮಾನಿಗಳಿಗೆ ಶಾಕಿಂಗ್ ವಿಷಯವಾಗಿದೆ.
ಇದರ ಮಧ್ಯೆ ಸಮಂತಾ ಡಿವೋರ್ಸ್ ಗೆ ಅವರ ಕಾಸ್ಟ್ಯೂಮ್ ಡಿಸೈನರ್ ಪ್ರೀತಂ ಝುಕಲ್ಕರ್ ಕೈವಾಡ ಇದೆ ಎಂಬ ಮಾತುಗಳು ಕೇಳಿಬರುತ್ತಿರುವ ಇದರ ಬೆನ್ನಲ್ಲೇ ನಟಿ ಶ್ರೀ ರೆಡ್ಡಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
‘ಪ್ರೀತಮ್ ಒಬ್ಬ ಸಲಿಂಗಕಾಮಿ. ಆತನ ಜತೆ ಸಮಂತಾ ಸಂಬಂಧ ಬೆಳೆಸಲು ಸಾಧ್ಯವಿಲ್ಲ. ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಗೆ ಪ್ರೀತಮ್ ಕಾರಣವಲ್ಲ’ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಬೆನ್ನಲ್ಲೇ ಸಮಂತಾ ಮತ್ತು ಪ್ರೀತಂ ಝುಕಲ್ಕರ್ ಒಟ್ಟಿಗೆ ಇರುವ ಫೋಟೋವೊಂದು ವೈರಲ್ ಆಗಿತ್ತು. ಈ ಫೋಟೋವನ್ನು ಸಮಂತಾರ ಹುಟ್ಟುಹಬ್ಬದ ದಿನ ಝುಕಲ್ಕರ್ ತನ್ನ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ “ಐ ಲವ್ ಯು” ಎಂದು ಬರೆದುಕೊಂಡಿದ್ದ. ಡಿವೋರ್ಸ್ ಘೋಷಣೆ ಮಾಡಿದ ಬೆನ್ನಲ್ಲೇ ಆ ಪೋಸ್ಟ್ ಅನ್ನು ಝುಕಲ್ಕರ್ ಡಿಲೀಟ್ ಮಾಡಿದ್ದರು.
ಈ ವಿಚ್ಛೇದನಕ್ಕೆ ತಾನೇ ಕಾರಣ ಎಂಬ ಗಾಸಿಪ್ ಹೆಚ್ಚುತ್ತಿದ್ದಂತೆ ಬೇಸರಗೊಂಡಿದ್ದ ಪ್ರೀತಮ್ , ‘ನಾಗ ಚೈತನ್ಯ ಅವರು ಈ ಬಗ್ಗೆ ಸ್ಪಷ್ಟನೆ ನೀಡಬಹುದಿತ್ತು. ನನ್ನ ಪಾಲಿಗೆ ಸಮಂತಾ ಸಹೋದರಿ ಇದ್ದಂತೆ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಸದ್ಯ ಶ್ರೀರೆಡ್ಡಿ ಅವರ ಸಲಿಂಗಕಾಮಿ ಎಂಬ ಮಾತಿಗೆ ಪ್ರೀತಮ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.
PublicNext
18/10/2021 09:28 pm