ಹೈದ್ರಾಬಾದ್: ಸೂಪರ್ ಸ್ಟಾರ್ ಮಹೇಶ್ ಬಾಬು ಸಿನಿಮಾಗಳ ಖದರ್ ಬೇರೆ ಥರಾನೇ ಇರುತ್ತದೆ. ಅದನ್ನ ಕಂಡೋರು ದಿಲ್ ಖುಷ್ ಆಗುತ್ತಾರೆ. ಅಭಿಮಾನಿಗಳ ಪಾಲಿಗೆ ಮಹೇಶ್ ಬಾಬು ಪ್ರಿನ್ಸೇ ಬಿಡಿ. ಆದರೆ ಈ ನಾಯಕ ಈಗೊಂದು ಹೊಸ ಸುದ್ದಿ ಕೊಟ್ಟಿದ್ದಾರೆ. ತಮ್ಮ ಮುಂದಿನ ಚಿತ್ರದ ಡೈರೆಕ್ಟರ್ ಯಾರು ಅನ್ನೋದನ್ನ ರಿವೀಲ್ ಮಾಡಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದ್ದಾರೆ.
ಪ್ರಿನ್ಸ್ ಮಹೇಶ್ ಬಾಬು ಚಿತ್ರಗಳ ಶೈಲಿ ಹೆಚ್ಚು ಕಡಿಮೆ ಒಂದೇ ಥರವೇ ಇರುತ್ತವೆ. ಬೇರೆ ಪ್ರಯೋಗಳನ್ನ ನಟ ಮಹೇಶ್ ಬಾಬು ಒಪ್ಪಿಕೊಳ್ಳೋದಿಲ್ಲವೋ ಇಲ್ಲವೇ ನಿರ್ದೇಶಕರೇ ಆ ರೀತಿಯ ಕಥೆ ಮಾಡ್ತಾರೋ ಗೊತ್ತಿಲ್ಲ. ಈಗ ಈ ನಾಯಕ ನಟನನ್ನ ಬೇರೆ ರೀತಿಯಲ್ಲಿಯೇ ತೋರಿಸೋಕೆ ಬರ್ತಿದ್ದಾರೆ ಒಬ್ಬ ನಿರ್ದೇಶಕ. ಅವರೇ ಎಸ್.ಎಸ್. ರಾಜಮೌಳಿ. ಮಹೇಶ್ ಗಾಗಿ ರಾಜಮೌಳಿ ಸಿನಿಮಾ ಮಾಡ್ತಿದ್ದಾರೆ. ಮಹೇಶ್ ಬಾಬು ಕೂಡ ಇದನ್ನ ಒಪ್ಪಿಕೊಂಡಿದ್ದಾರೆ. ಇದು ನನ್ನ ಜೀವನದ ಅತಿ ದೊಡ್ಡ ಸಿನಿಮಾ. ಎಲ್ಲ ಭಾಷೆಯಲ್ಲೂ ರಿಲೀಸ್ ಆಗುತ್ತದೆ ಅಂತಲೇ ಮಹೇಶ್ ಹೇಳಿಕೊಂಡಿದ್ದಾರೆ. ಉಳಿದಂತೆ ಮಹೇಶ್ ಬಾಬು ಒಪ್ಪಿಕೊಂಡಿರೋ ಕೆಲ ಪ್ರೋಜೆಕ್ಟ್ ಗಳು ಇನ್ನೂ ಬಾಕಿ ಇವೆ. ಅವು ಮುಗಿದ ಮೇಲೇನೆ ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಅಭಿನಯಿಸಲಿದ್ದಾರೆ.
PublicNext
17/10/2021 07:45 pm