ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಚ್ಚನ ಅಭಿಮಾನಿಗಳಲ್ಲಿ Sorry ಕೇಳಿದ ಸೂರಪ್ಪ ಬಾಬು

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ, ದುರಂತ ನೋಡಿ ಇಂದು ಸೂಪರ್ ಸ್ಟಾರ್ ಕಿಚ್ಚನ ಸಿನಿಮಾ ರಿಲೀಸ್ ಆಗುತ್ತಿಲ್ಲ. ಇಂಡಸ್ಟ್ರೀ ಲೆಕ್ಕದಲ್ಲಿ ಇದು ದೊಡ್ಡ ಏಟೇ ಸರಿ.ಇದರಿಂದ ಸುದೀಪ್ ಕೂಡ ಬೇಸರಗೊಂಡಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ಕೂಡ ನೋವಿನಲ್ಲಿಯೆ ಇದ್ದಾರೆ. ಅದಕ್ಕೇನೆ ವೀಡಿಯೋ ಮೂಲಕ ಸೂರಪ್ಪ ಬಾಬು ಕಿಚ್ಚನ ಬಳಿ, ಕಿಚ್ಚನ ಫ್ಯಾನ್ಸ್ ಬಳಿ Sorry ಕೇಳಿದ್ದಾರೆ.

ಸೂರಪ್ಪ ಬಾಬು ತುಂಬಾ ನೋವಿನಲ್ಲಿಯೇ ನುಡಿದಿದ್ದಾರೆ. ತಮ್ಮ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ-3 ಇವತ್ತು ಚಿತ್ರ ರಿಲೀಸ್ ಆಗಬೇಕಿತ್ತು.ಆದರೆ, ಚಿತ್ರ ರಿಲೀಸ್ ಹಿಂದೆ ಷಡ್ಯಂತ್ರ ನಡೆದಿದೆ. ಅದು ಕಿಚ್ಚ ಸುದೀಪ್ ಅವರಿಗೂ ಗೊತ್ತಿದೆ. ಆದರೂ, ಅಭಿಮಾನಿಗಳಲ್ಲಿ ನಾನು ಕ್ಷಮೆ ಕೇಳುತ್ತೇನೆ. ನಾಳೆ ಬೆಳಗ್ಗೆ 6 ಗಂಟೆಗೇನೆ ಕೋಟಿಗೊಬ್ಬ-೦3 ಚಿತ್ರದ ಪ್ರದರ್ಶನ ಇರುತ್ತದೆ. ಸುದೀಪ್ ಸರ್ ನೀವೂ ಟ್ವೀಟ್ ಮೂಲಕ ಅಭಿಮಾನಿಗಳಿಗೆ ತಿಳಿಸಬೇಕೆಂದು ಕೇಳಿಕೊಳ್ಳುತ್ತೇನೆ. ಹೀಗೆ ವೀಡಿಯೋ ಮೂಲಕವೇ ಚಿತ್ರ ನಿರ್ಮಾಪಕ ಸೂರಪ್ಪ ಬಾಬು,ಸಮಸ್ತ ನಾಡಿನ ಕಿಚ್ಚನ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.

Edited By :
PublicNext

PublicNext

14/10/2021 01:03 pm

Cinque Terre

73.61 K

Cinque Terre

0