ಬೆಂಗಳೂರು: ಬಾಲಿವುಡ್ ಸುಂದರಿ ಸನ್ನಿ ಲಿಯೋನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ ಈ ಚೆಲುವೆ. ಇವರಿಗೆ ಸಂಬಂಧಿಸಿದ ವಿಷಯಗಳು ವೈರಲ್ ಆಗುತ್ತಲೇ ಇರುತ್ತವೆ. ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಅವರು ಆಗಾಗ ಇನ್ ಸ್ಟಾಗ್ರಾಂನಲ್ಲಿ ಇಂಟರೆಸ್ಟಿಂಗ್ ವಿಷಯವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇತ್ತೀಚಿನ ದಿನಗಳಲ್ಲಿ ಸನ್ನಿ ಕುಟುಂಬ, ಮನೆ ಮತ್ತು ಮಕ್ಕಳ ನಿರ್ವಹಣೆ ಕುರಿತು ಹೆಚ್ಚಿನ ವಿಚಾರಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.ಸದ್ಯ ಸನ್ನಿ ಲಿಯೋನ್, ಮುಂಬೈನ ತಮ್ಮ ಅಪಾರ್ಟ್ ಮೆಂಟ್ ಫೋಟೊ ಪೋಸ್ಟ್ ಮಾಡಿದ್ದಾರೆ. ಅಪಾರ್ಟ್ ಮೆಂಟ್ ನ ಈಜುಕೊಳದಲ್ಲಿ ನಿಂತುಕೊಂಡಿರುವ ಫೋಟೊ ಇದಾಗಿದೆ.
ಮುಂಬೈನ ಹವಾಮಾನ ಉತ್ತಮವಾಗಿದೆ. ಮನೆಯಲ್ಲಿಯೇ ಈ ಅಹ್ಲಾದಕರ ವಾತಾವರಣ ಹೊಂದಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.
PublicNext
12/10/2021 04:33 pm