ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಲೆ ಕಳೆದುಕೊಂಡ ಅಸಲಿ-ನಕಲಿ ಕಿಂಗ್ ಖಾನ್ಸ್

ಮುಂಬೈ:ಕಿಂಗ್ ಖಾನ್ ಶಾರುಕ್ ಪುತ್ರ ಆರ್ಯನ್ ಖಾನ್ ಬಂಧನ ಆಗಿದ್ದೇ ತಡ. ಶಾರುಕ್ ಇಮೇಜ್ ಏನೇನೋ ಆಗಿ ಹೋಯ್ತು.ಕೆಲವು ಜಾಹೀರಾತುಗಳೂ ಕೈಬಿಟ್ಟು ಹೋದವು.ಅಸಲಿ ಶಾರುಕ್ ಖಾನ್ ಕಥೇನೇ ಹೀಗಿದೆ. ಇನ್ನು ಜ್ಯೂನಿಯರ್ ಶಾರುಕ್ ಖಾನ್ ಗಳ ಸ್ಥಿತಿ ಅಂತೂ ಹೇಳೋಕೆ ಆಗೋದಿಲ್ಲ.ಶಾರುಕ್ ಖಾನ್ ಇಮೇಜ್ ನಂಬಿಕೊಂಡೇ ಜೀವನ ಮಾಡ್ತಿದ್ದ ಜ್ಯೂನಿಯರ್ ಶಾರುಕ್ ಖಾನ್ ರಾಜು ರಾಹಿಕ್ವಾರ್ ಬಳಿ ಈಗ ಮಕ್ಕಳ ಶಾಲೆ ಫೀಸ್ ಕಟ್ಟಲೂ ದುಡ್ಡಿಲ್ಲ..ಹಂಗಿದೆ ಕಥೆ.

ಶಾರುಕ್ ಖಾನ್ ಥರ ಕಾಣೋರು ಅನೇಕರಿದ್ದಾರೆ. ಶಾರುಕ್ ಖಾನ್ ರನ್ನ ಅನುಕರಿಸುತ್ತಲೇ ಜ್ಯೂನಿಯರ್ ಕಿಂಗ್ ಖಾನ್ ಆಗಿದ್ದಾರೆ. ಆದರೆ, ಇವತ್ತಿನ ದಿನಕ್ಕೆ ಶಾರುಕ್ ಲೈಫ್ ಅಲ್ಲಿ ಏನೂ ಚೆನ್ನಾಗಿಲ್ಲ. ಪುತ್ರ ಆರ್ಯನ್ ಖಾನ್,ಮುಂಬೈ ಕ್ರೂಸ್ ಡ್ರಗ್ಸ್ ಕೇಸ್ ಅಲ್ಲಿ ಸಿಲುಕಿದ್ದೇ ಬಂತು.ಕಿಂಗ್ ಖಾನ್ ಇಮೇಜ್ ಡ್ಯಾಮೇಜ್ ಆಗಿದೆ.

ಇಷ್ಟೆಲ್ಲ ಆದ್ಮೇಲೆ ಜನ ರಿಯಲ್ ಶಾರುಕ್ ರನ್ನೆ ತೆಗೆದುಕೊಳ್ಳುತ್ತಿಲ್ಲ.ಜ್ಯೂನಿಯರ್ ಗಳ ಅಭಿನಯ ಸ್ವೀಕರಿಸುತ್ತಾರೆಯೇ ? ಪರಿಸ್ಥಿತಿ ಹೀರೋದ್ರಿಂದಲೇ, ರಾಜು ರಾಹಿಕ್ವಾರ್ ಹೆಸರಿನ ಜ್ಯೂನಿಯರ್ ಶಾರುಕ್ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಮಕ್ಕಳ ಶಾಲೆಯ ಫೀಸ್ ಕಟ್ಟಲು ದುಡ್ಡಿಲ್ಲ.ಇದಕ್ಕೆ ನೇರವಾಗಿ ಶಾರುಕ್ ಖಾನ್ ಕಾರಣ ಅಲ್ಲದೇ ಇದ್ದರೂ, ಸದ್ಯ ಶಾರುಕ್ ಖಾನ್ ಸ್ಥಿತಿಯಿಂದ ಯಾರೂ ಈ ಜ್ಯೂನಿಯರ್ ಶಾರುಕ್ ನನ್ನ ಇವೆಂಟ್ ಗೆ ಕರೆಯುತ್ತಿಲ್ಲ. ಲಾಕ್ ಡೌನ್ ನಿಂದ ತತ್ತರಿಸಿದ್ದ ಜ್ಯೂನಿಯರ್ ಶಾರುಕ್ ರಾಜು,ಇನ್ನೇನು ಕಾರ್ಯಕ್ರಮ ಸಿಗುತ್ತವೆ ಅಂದುಕೊಂಡಿದ್ದರು. ಆದರೆ ಶಾರುಕ್ ಖಾನ್ ಇಮೇಜ್ ಈಗ ಸರಿಯಿಲ್ಲ. ನಿಮನ್ನ ಯಾರೂ ನೋಡಲು ಇಷ್ಟಪಡೋದಿಲ್ಲ ಅಂತ ಆಯೋಜಕರು ಈ ಜ್ಯೂನಿಯರ್ ಶಾರುಕ್ ಖಾನ್ ಗೆ ಹೇಳ್ತಿದ್ದಾರೆ. ಅದಕ್ಕೇನೆ ಈ ಜ್ಯೂನಿಯರ್ ಶಾರುಕ್ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.

ಕಿಂಗ್ ಖಾನ್ ಶಾರುಖ್ ಲೈಫ್ ಅಯೋಮಯವಾಗಿದೆ. ಪುತ್ರ ಆರ್ಯನ್ ಖಾನ್ ಜೈಲ್ ಅಲ್ಲಿದ್ದರೆ, ಶಾರುಕ್ ಖಾನ್ ಮಗನ ಬಿಡಿಸೋದು ಹೇಗೆ ಅಂತ ಯೋಚಿಸುತ್ತಿದ್ದಾರೆ. ಆದರೆ ಶಾರುಕ್ ನಂಬಿಕೊಂಡೇ ಜೀವನ ಮಾಡ್ತಿರೋ ಜ್ಯೂನಿಯರ್ ಶಾರುಕ್ ಗಳ ಗತಿ ಈಗ ಹೇಳತೀರದು.ಮಕ್ಕಳ ಫೀಸ್ ಕಟ್ಟಲೂ ಈಗ ದುಡ್ಡಿಲ್ಲ ಆ ಜ್ಯೂನಿಯರ್ ಶಾರುಕ್ ಬಳಿ.

Edited By :
PublicNext

PublicNext

12/10/2021 01:53 pm

Cinque Terre

51.14 K

Cinque Terre

1