ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-03 ಚಿತ್ರ ರಿಲೀಸ್ ಮೊದಲೇ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರ ಪ್ರೇಮಿಗಳು ಹೆಚ್ಚುಕಡಿಮೆ ಒಂದೂವರೆ ವರ್ಷ ಕೋವಿಡ್ ಕಾರಣ ಓಟಿಟಿಯಲ್ಲಿಯೇ ಸಿನಿಮಾ ನೋಡಿದ್ದಾರೆ. ಆದರೆ ಈಗ ಕೋಟಿಗೊಬ್ಬ-03 ಜನರನ್ನ ಥಿಯೇಟರ್ ಗೆ ಕರೆತರಲು ಸಜ್ಜಾಗಿದೆ.
ಕಿಚ್ಚ ಸುದೀಪ್ ತಮ್ಮ ಜೆಪಿನಗರದ ಮನೆಯಲ್ಲಿ ನಡೆದ ಚಾನೆಲ್ ಪ್ರೆಸ್ ಮೀಟ್ ಅಲ್ಲಿ ಸಾಕಷ್ಟು ವಿಷಯ ಮಾತನಾಡಿದ್ದಾರೆ. ಚಿತ್ರದ ಮೇಕಿಂಗ್ ಅನುಭವ ಸೂಪರ್ ಅಂತಲೇ ಹೇಳಿಕೊಂಡಿದ್ದಾರೆ. ವಿದೇಶದಲ್ಲಿ ನಡೆದ ಕಾರ್ ಚೇಜಿಂಗ್ ಸೀನ್ ಅಂತೂ ಹೊಸ ಅನುಭವವನ್ನೆ ಕೊಟ್ಟಿದೆ. ಹುಚ್ಚ ಚಿತ್ರದ ಕಥೆ ಹೇಗೆ ಹೇಳಬೇಕೋ ಹಾಗೆ ಹೇಳಿದ್ದೇವು. ಕೋಟಿಗೊಬ್ಬ ಚಿತ್ರದ ಕಥೆ ಹೇಗೆ ಹೇಳಬೇಕೋ ಹಾಗೇನೆ ಹೇಳಿದ್ದೇವೆ ಅಂದಿದ್ದಾರೆ ಕಿಚ್ಚ.
ಸಿನಿಮಾ ರಿಲೀಸ್ ಆದಾಗ ಪೈರಸಿ ಕಾಟ ಹೆಚ್ಚಾಗುತ್ತದೆ. ಕೋಟಿಗೊಬ್ಬ-03 ಚಿತ್ರವೂ ಅದಕ್ಕೆ ಹೊರತಾಗಿಲ್ಲ. ಚಿತ್ರದ
ನಿರ್ಮಾಪಕರಾದ ಸೂರಪ್ಪ ಬಾಬು ಮುನ್ನೆಚ್ಚರಿಕೆ ಕ್ರಮವನ್ನ ಈಗಾಗಲೇ ತೆಗೆದುಕೊಂಡಿದ್ದಾರೆ. ಆದರೆ ಕಿಚ್ಚ ಸುದೀಪ್ ಇದರ ಬಗ್ಗೆ ಏನ್ ಹೇಳ್ತಾರೆ ಗೊತ್ತ? ಪೈರಸಿಗೆ ಹೆದರಲ್ಲ. ಕಳ್ಳರಿಗೆ ಭಯಪಡಲ್ಲ ಅಂತಲೇ ಕಿಚ್ಚ ಸುದೀಪ್ ಖಡಕ್ ಆಗಿಯೇ ರಿಯಾಕ್ಟ್ ಮಾಡಿದ್ದಾರೆ.
ಕೋಟಿಗೊಬ್ಬ-03 ಚಿತ್ರದ ಟ್ರೈಲರ್ ನೋಡಿದ್ದ ಮೋಹಕ ತಾರೆ ರಮ್ಯ,ವಾರೇ ವ್ಹಾ ಸೂಪರ್ ಅಂದಿದ್ದರು. ಕಿಚ್ಚನಿಗೆ ವಯಸ್ಸೇ ಆಗೋದಿಲ್ಲ ಅಂತಲೂ ಸಖತ್ ಇನ್‌ಸ್ಟಾಗ್ರಾಮನಲ್ಲಿ ಕಾಮೆಂಟ್ ಕೂಡ ಹಾಕಿದ್ದರು. ರಮ್ಯ ಕಾಮೆಂಟ್ ಗೆ ಕಿಚ್ಚ ಸುದೀಪ್ ಈ ಚಾನೆಲ್ ಮೀಟ್ ಅಲ್ಲಿಯೇ ರಿಯಾಕ್ಟ್ ಮಾಡಿದ್ದಾರೆ. ಸಾಕಷ್ಟು ವರ್ಷಗಳ ಬಳಿಕ ರಾಜಕೀಯ ಎಲ್ಲಾದರ ನಡುವೇನೂ ರಮ್ಯ ಕಾಮೆಂಟ್ ಮಾಡಿದ್ದಾರೆ. ಅದು ನನಗೆ ತುಂಬಾ ಖುಷಿ ತಂದಿದೆ ಅಂದಿದ್ದಾರೆ ಸುದೀಪ್.
ಉಳಿದಂತೆ ಅಕ್ಟೋಬರ್-14 ಕ್ಕೆ ಕೋಟಿಗೊಬ್ಬ-03 ಎಲ್ಲೆಡೆ ರಿಲೀಸ್ ಆಗುತ್ತಿದೆ. ಅಭಿಮಾನಿಗಳೂ ಕೂಡ ಈ ಚಿತ್ರಕ್ಕಾಗಿಯೇ ಕಾತರದಿಂದ ಕಾಯುತ್ತಿದ್ದಾರೆ.
PublicNext
11/10/2021 06:37 pm