ಮುಂಬೈ:ಬಾಲಿವಡ್ ನ ಖಳನಾಯಕ ನಟ ಸೋನು ಸೂದ್ ಕೋವಿಡ್ ಟೈಮ್ ಅಲ್ಲಿ ಸಾಮಾನ್ಯ ಜನಕ್ಕೆ ದೇವರೆ ಆಗಿದ್ದಾರೆ.ಕಷ್ಟ ಅಂತ ಎಲ್ಲರಿಗೂ ಸಹಾಯ ಮಾಡಿ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ಇಷ್ಟೆಲ್ಲ ಇದ್ಮೇಲೆ ಅಭಿಮಾನಿಗಳು ಹುಟ್ಟಲ್ವೇ.ಇಲ್ಲೊಬ್ಬ ಅಭಿಮಾನಿ ಏನ್ ಮಾಡಿದ್ದಾರೆ ನೋಡಿ.
ಸೋನು ಸೂದ್ ಖಳನಾಯಕ ನಟ. ಆದರೆ, ಇದು ತೆರೆ ಮೇಲಷ್ಟೇ ಅನ್ನೋದು ವಿಶೇಷ. ಸಮಾಜದ ಬಗ್ಗೆ ವಿಶೇಷ ಕಳಕಳಿ ಇರೋ ಸೋನು ಸೂದ್ ನಿಜ ಜೀವನದಲ್ಲಿ ಹೀರೋ. ಈ ಹೀರೋನನ್ನ ಒಬ್ಬ ಅಭಿಮಾನಿ ಮೋಬೈಲ್ ನ ಪುಟ್ಟ ಸಿಮ್ ಕಾರ್ಡ್ ಮೇಲೆ ಬಿಡಿಸಿದ್ದಾನೆ.ಇದು ನಿಜಕ್ಕೂ ಸ್ಪೆಷಲ್ ಆಗಿಯೇ ಇದೆ. ಸ್ಪೆಷಲ್ ಆಗಿಯೇ ಕಾಣುತ್ತದೆ. ಅಂದ್ಹಾಗೆ, ಆ ಅಭಿಮಾನಿ ಹೆಸರು ಸೋಮಿನ್. ಈ ಸೋಮಿನ್ ಈಗ ಈ ಪೇಂಟಿಂಗ್ ಮೂಲಕ ಫುಲ್ ವೈರಲ್ ಆಗುತ್ತಿದ್ದಾನೆ.
PublicNext
08/10/2021 12:58 pm