ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟಿ ವಿಜಯಲಕ್ಷ್ಮಿ ಬೆನ್ನಿಗೆ ನಿಂತ ಫೈರಿಂಗ್ ಸ್ಟಾರ್ ಹುಚ್ಚವೆಂಕಟ್

ಬೆಂಗಳೂರು: ಕನ್ನಡದ ನಟಿ ವಿಜಯಲಕ್ಷ್ಮಿ ಮತ್ತೊಂದು ವೀಡಿಯೋ ಮಾಡಿ ವೈರಲ್ ಆಗಿದ್ದಾರೆ. ಈ ವೀಡಿಯೋದ ತುಂಬೆಲ್ಲ ಬರಿ ಥ್ಯಾಂಕ್ಸ್ ಅನ್ನೇ ಹೇಳಿದ್ದಾರೆ. ಅದು ಯಾರಿಗೆ ಅಂತೀರಿ. ಹೌದು ವಿಜಯಲಕ್ಷ್ಮಿ ಪರ ನಿಂತು ಬಿಟ್ಟಿದ್ದಾರೆ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್. ಅದಕ್ಕೇನೆ ಈಗ ವಿಜಯಲಕ್ಷ್ಮಿ ಮಾಡಿದ್ದಾರೆ ಈ ವೀಡಿಯೋ..

ವಿಜಯಲಕ್ಷ್ಮಿ ಕಷ್ಟದಲ್ಲಿಯೇ ಇದ್ದಾರೆ. ಇವರ ಕಷ್ಟ ಕೇಳಿದ ಅನೇಕರು ಹೆಲ್ಪ್ ಕೂಡ ಮಾಡಿದ್ದಾರೆ. ಆದರೂ ವಿಜಯಲಕ್ಷ್ಮಿ ಅವರ ಕಷ್ಟ ಮುಗಿತಾನೇ ಇಲ್ಲ. ಹೀಗಿರೋವಾಗ ಈಗ ವಿಜಯಲಕ್ಷ್ಮಿ ಬೆನ್ನಿಗೆ ನಿಂತಿದ್ದಾರೆ ಫೈರಿಂಗ್ ಸ್ಟಾರ್ ಹುಚ್ಚವೆಂಕ. ಈ ಹಿಂದೆ ಒಂದ್ ವೀಡಿಯೋ ಮಾಡಿದ್ದ ಹುಚ್ಚವೆಂಕಟ್, ವಿಜಯಲಕ್ಷ್ಮಿ ನಮ್ಮ ಸಹೋದರಿ ಅವರಿಗೆ ಸಹಾಯ ಮಾಡಿ ಮನಸ್ಸಿಗೆ ನೋವು ಕೊಡಬೇಡಿ ಅಂತಲೇ ಕೇಳಿಕೊಂಡಿದ್ದರು. ಫೈರಿಂಗ್ ಸ್ಟಾರ್ ಈ ಕಾಳಜಿಗೆ ವಿಜಯಲಕ್ಷ್ಮಿ ವೀಡಿಯೋ ಮೂಲಕವೇ ಥ್ಯಾಂಕ್ಸ್ ಹೇಳಿದ್ದಾರೆ. ಹುಚ್ಚ ವೆಂಕಟ್ ಗೆ ಥ್ಯಾಂಕ್ಸ್ ಹೇಳಿರೋ ವಿಜಯಲಕ್ಷ್ಮಿ ಅವ್ರ ಈ ವೀಡಿಯೋ ಕೂಡ ಸದ್ಯ ಎಲ್ಲೆಡೆ ಹರಿದಾಡುತ್ತಿದೆ.

Edited By :
PublicNext

PublicNext

05/10/2021 08:04 pm

Cinque Terre

66.17 K

Cinque Terre

4