ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ರಿಯಾಲಿಟಿ ಶೋ ನಲ್ಲಿ ನಿರೂಪಕಿಯಾಗಿರುವ ನಟಿ ಅನುಪಮಾ ಗೌಡ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವಾರ ಹಳ್ಳಿ ರೌಂಡ್ ಆಗಿದ್ದ ಕಾರಣ ಮಾಲಾಶ್ರೀ ಅವರ ರಾಮಚಾರಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಈ ವಾರ ರೆಟ್ರೋ ಲುಕ್ ಆಗಿದ್ದ ಕಾರಣ ನಟಿ ಆರತಿ ಲುಕ್ ನಲ್ಲಿ ಮಿಂಚಿದ್ದಾರೆ. ಸದ್ಯ ಫೋಟೋಶೂಟ್ ನ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಎಲಿಫ್ಯಾಂಟ್ ಗ್ರೇ ಬಣ್ಣದ ಸೀರೆಗೆ ಕಪ್ಪು ಬ್ಲೌಸ್ ಮ್ಯಾಚ್ ಮಾಡಿಕೊಂಡು ಮಲ್ಲಿಗೆ ಹೂವು, ಗುಲಾಬಿ ಮುಡಿದಿದ್ದಾರೆ. ಅನುಪಮಾ ಅವರ ರೆಟ್ರೋ ಲುಕ್ ನೋಡಿ ಕೆಲವು ನಿರ್ದೇಶಕರು ನಟಿ ಆರತಿ ಬಯೋಪಿಕ್ ಮಾಡಬೇಕು ಎಂದು ಪ್ಲಾನ್ ಮಾಡುವುದಕ್ಕೆ ಮುಂದಾಗಿದ್ದಾರಂತೆ.
PublicNext
28/09/2021 05:29 pm