ಪಣಜಿ: ಪ್ರಿಯಕರನೊಂದಿಗೆ ಹಾಲಿ ಡೇ ಟ್ರಿಪ್ಗೆ ಹೊರಟ್ಟಿದ್ದ ಮರಾಠಿಯ ಯುವ ನಟಿ ಈಶ್ವರಿ ದೇಶಪಾಂಡೆ (25) ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ನಟಿ ಈಶ್ವರಿ ದೇಶಪಾಂಡೆ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ದುರಂತ ಸಾವನ್ನಪಿದ್ದಾರೆ. ಸೆಪ್ಟೆಂಬರ್ 15ರಂದು ನಟಿ ಈಶ್ವರಿ ಗೆಳೆಯ ಶುಭಂ ದಡ್ಗೆ ಜೊತೆಗೆ ಗೋವಾಗೆ ಬಂದಿದ್ದರು. ಸೆಪ್ಟೆಂಬರ್ 20 (ಸೋಮವಾರ) ಇಬ್ಬರು ಪ್ರಯಾಣಿಸುತ್ತಿದ್ದ ಕಾರು ಗೋವಾ ಸಮೀಪದ ಕಲಾಂಗುಟ್ ಬಳಿ ನಿಯಂತ್ರಣ ತಪ್ಪಿ ಕಾಲುವೆಗೆ ಜಾರಿ ಬಿದ್ದಿದೆ. ಈ ವೇಳೆ ಕಾರು ಸೆಂಟ್ರಲ್ ಲಾಕ್ ಆಗಿದ್ದ ಕಾರಣ ಕಾರಿನಿಂದ ಹೊರ ಬರಲಾಗದೆ ಸಾವನ್ನಪ್ಪಿದ್ದು, ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ನಟಿಯೊಂದಿಗೆ ಇದ್ದ ಆಕೆಯ ಪ್ರಿಯಕರ 28 ವರ್ಷದ ಶುಭಮ್ ಕೂಡ ಸಾವನ್ನಪ್ಪಿದ್ದಾರೆ.
PublicNext
22/09/2021 11:03 am