ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದ್ರಾಗೆ ವಿಚ್ಛೇದನ ಕೊಡುವ ಸುಳಿವು ಕೊಟ್ಟ ಶಿಲ್ಪಾ

ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಅವುಗಳನ್ನು ವಿವಿಧ ಆ್ಯಪ್ ಗಳಿಗೆ ಅಪ್ಲೋಡ್ ಮಾಡಿದ ಆರೋಪದಡಿ ಬಂಧನಕ್ಕೀಡಾಗಿರುವ ಉದ್ಯಮಿ ರಾಜ್ ಕುಂದ್ರಾ ಗೆ ಪತ್ನಿ ಶಿಲ್ಪಾ ಶೆಟ್ಟಿ ವಿಚ್ಛೇದನ ನೀಡುವ ಸುಳಿವೊಂದನ್ನಾ ನೀಡಿ ಸುದ್ದಿಯಲ್ಲಿದ್ದಾರೆ. 'ಹಿಂದೆ ಮಾಡಿದ ಕೆಲಸಗಳಿಂದಲೇ ನಾನು ಗುರುತಿಸಿಕೊಳ್ಳಬೇಕಿಲ್ಲ. ನನಗೆ ಬೇಕಾದ ಭವಿಷ್ಯವನ್ನು ನಾನು ಸೃಷ್ಟಿ ಮಾಡಿಕೊಳ್ಳಬಹುದು' ಎಂಬ ಸಾಲುಗಳು ಶಿಲ್ಪಾ ಶೆಟ್ಟಿಯ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಗಮನ ಸೆಳೆಯುತ್ತಿವೆ.

ರಾಜ್ ಕುಂದ್ರಾ ಕಾಮಕಾಂಡ ಬಯಲಾದಾಗಿನಿಂದ ವಿಚ್ಛೇದನ ಕುರಿತ ಸುದ್ದಿ ಕೇಳಿಬರುತ್ತಲೇ ಇದೆ. ರಾಜ್ ಕುಂದ್ರಾ ಜೊತೆಗಿನ ತಮ್ಮ ದಾಂಪತ್ಯಕ್ಕೆ ಅಂತ್ಯಹಾಡಲು ಶಿಲ್ಪಾ ನಿರ್ಧರಿಸುತ್ತಿದ್ದಾರೆ ಎಂಬ ಗುಸುಗುಸು ಹಬ್ಬಿದೆ. ಈಗ ಅವರು ಒಂದು ಪುಸ್ತಕದಲ್ಲಿನ 'ಹೊಸ ಅಂತ್ಯ' ಎಂಬ ಚಾಪ್ಟರ್ ನ ಕೆಲವು ತುಣುಕುಗಳನ್ನು ಹಂಚಿಕೊಂಡಿದ್ದು, ಇದು ವಿಚ್ಛೇದನದ ಸುಳಿವು ಇರಬಹುದು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

18/09/2021 08:56 pm

Cinque Terre

82.14 K

Cinque Terre

1