ತಮ್ಮ ಬಾಲ್ಯದ ಅಪರೂಪದ ಫೋಟೋ ಹಾಕಿದ ನಟ ಶರಣ್, ತಂಗಿ ಹಾಗೂ ನಟಿ ಶೃತಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.
ತಂಗಿ ಶೃತಿಯೊಂದಿಗೆ ತೆಗೆಸಿಕೊಂಡ ಬಾಲ್ಯದ ಕಪ್ಪು-ಬಿಳುಪು ಫೋಟೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಟ ಶರಣ್ "ನನ್ನ ಪ್ರೀತಿಯ ತಂಗಿ ಹಾಗೂ ನನ್ನ ಬೆಸ್ಟ್ ಫ್ರೆಂಡ್ ಶೃತಿರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಈ ಫೋಟೋ ನೋಡಿದ ಅಭಿಮಾನಿಗಳು 'ಶರಣ್ ಅವರೇ ನೀವೇ ಚಿಕ್ಕವರು ಎಂದುಕೊಂಡಿದ್ದೆ. ಯಾಕಂದ್ರೆ ನೀವು ಶೃತಿಗಿಂತ ಚಿಕ್ಕವರಂತೆ ಕಾಣುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ' ಕರ್ಪೂರದ ಗೊಂಬೆ ಹುಟ್ಟು ಹಬ್ಬದ ಶುಭಾಶಯಗಳು ಎಂದಿದ್ದಾರೆ.
PublicNext
18/09/2021 12:48 pm