ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ನಟನ ಕುರಿತು ಹೆಮ್ಮೆ ಪಡುವುದಕ್ಕೆ ಇನ್ನೊಂದು ಕಾರಣ ಸಿಕ್ಕಿದೆ. ಇತ್ತೀಚೆಗೆ ನಟನ ವಿಡಿಯೋ ಒಂದು ವೈರಲ್ ಆಗಿದೆ. ನಟ ರಸ್ತೆ ಬದಿ ಕಾರು ನಿಲ್ಲಿಸಿ ತಿಂಡಿ ತಿಂದಿದ್ದಾರೆ. ಈ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಳಗ್ಗೆ ಪುಷ್ಪಾ ಸಿನಿಮಾ ಸೆಟ್‌ಗೆ ಹೊರಟಿದ್ದ ನಟ ರಸ್ತೆ ಮಧ್ಯೆ ತಳ್ಳುಗಾಡಿಯೊಂದರ ಮುಂದೆ ಕಾರು ನಿಲ್ಲಿಸಿದ್ದಾರೆ. ನಟ ಅಂಗಡಿಯಿಂದ ತಿಂಡಿ ತಿಂದು ಹೊರಬರುವುದನ್ನು ವಿಡಿಯೋದಲ್ಲಿ ಕಾಣಬಹುದು.
ವೀಡಿಯೊದಲ್ಲಿ, ಅಲ್ಲು ಅರ್ಜುನ್ ಗುಡಿಸಲಿನಿಂದ ಹೊರಬಂದು ತನ್ನ ತಿಂಡಿಗೆ ಹಣ ಪಾವತಿಸುವಂತೆ ಒತ್ತಾಯಿಸುತ್ತಿರುವುದು ಕಂಡುಬರುತ್ತದೆ. ಆದ್ರೆ ಉಪಾಹಾರ ಗೃಹದ ಮಾಲೀಕರು ನಟನಿಂದ ಹಣ ಪಡೆಯಲು ನಿರಾಕರಿಸಿದ್ದಾರೆ.
PublicNext
15/09/2021 02:20 pm