ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಂದೆಯ ಆ ಒಂದು ಮಾತಿಗೆ ತಮ್ಮ ಹೆಸರನ್ನೇ ಬದಲಿಸಿಕೊಂಡ್ರು ಮಲ್ಲಿಕಾ ಶೆರಾವತ್.!

ಮುಂಬೈ: ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಮೂಲ ಹೆಸರಿನ ಬಗ್ಗೆ ಅದೆಷ್ಟೋ ಜನರಿಗೆ ಗೊತ್ತಿಲ್ಲ. ಅಷ್ಟಕ್ಕೂ ಮಲ್ಲಿಕಾ ತಮ್ಮ ಹೆಸರನ್ನು ಬದಲಿಸಿದ್ದು ಯಾಕೆ.? ಈ ಕುರಿತು ಅವರು ಬಾಲಿವುಡ್ ಬಬಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ

ವಾಸ್ತವವಾಗಿ ಮಲ್ಲಿಕಾ ಅವರ ಮೂಲ‌ ಹೆಸರು ರೀಮಾ ಲಂಬಾ. ಆದರೆ ತಂದೆ ಚಿತ್ರರಂಗಕ್ಕೆ ತೆರಳಲು ಆಕ್ಷೇಪ ವ್ಯಕ್ತಪಡಿಸಿದಾಗ ದಿಟ್ಟ ನಿರ್ಧಾರ ಕೈಗೊಂಡ ಮಲ್ಲಿಕಾ, ತಂದೆಯ ಕುಟುಂಬದ ಹೆಸರನ್ನೇ ಬಿಡಲು ಸಿದ್ಧರಾದರು. ಅವರ ಹೆಸರಿನಲ್ಲಿರುವ ‘ಶೆರಾವತ್’ ಮಲ್ಲಿಕಾರ ತಾಯಿಯವರ ಕುಟುಂಬದ್ದು. ಅದನ್ನೇ ತಾನು ಹೆಸರಿನಲ್ಲಿ ಇಟ್ಟುಕೊಳ್ಳುತ್ತೇನೆ ಎಂದ ಮಲ್ಲಿಕಾ, ರೀಮಾ ಲಂಬಾ ಇಂದ 'ಮಲ್ಲಿಕಾ ಶೆರಾವತ್' ಆಗಿ ಬದಲಾದರು.

ಈ ಬಗ್ಗೆ ಮಾತನಾಡಿರುವ ಮಲ್ಲಿಕಾ, "ನಾನು‌ ಚಿತ್ರರಂಗ ಪ್ರವೇಶಿಸುತ್ತೇನೆ ಎಂದಾಗ ತಂದೆ ಕುಟುಂಬದ ಹೆಸರನ್ನು ಹಾಳು ಮಾಡುತ್ತೀಯ ಎಂದು ಆಕ್ಷೇಪಿಸಿದ್ದರು. ಜೊತೆಗೆ ನಿನ್ನನ್ನು ಕುಟುಂಬದಿಂದ ಕೈ ಬಿಡುತ್ತೇನೆ ಎಂದು ಹೆದರಿಸಿದರು. ಪುರುಷ ಪ್ರಧಾನ ಸಮಾಜದ ವಿರುದ್ಧ ನಿಂತ ನಾನು, ತಂದೆಗೆ ಸ್ಪಷ್ಟವಾಗಿ ನಿಮ್ಮ ಹೆಸರನ್ನೇ ನಾನು ಬಿಟ್ಟಿದ್ದೇನೆ ಎಂದೆ. ನಿಮ್ಮನ್ನು(ತಂದೆ) ಗೌರವಿಸುತ್ತೇನೆ, ಪ್ರೀತಿಸುತ್ತೇನೆ. ಆದರೆ ಹೆಸರಿನಲ್ಲಿ ನನ್ನ ತಾಯಿಯ ನಾಮಧೇಯವನ್ನು ಬಳಸುತ್ತೇನೆ" ಎಂದಿದ್ದರಂತೆ. ಅದರಂತೆ ಮಲ್ಲಿಕಾ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಬಾಲಿವುಡ್ ಪ್ರವೇಶಿಸಿದರು.

Edited By : Vijay Kumar
PublicNext

PublicNext

13/09/2021 10:48 pm

Cinque Terre

35.68 K

Cinque Terre

1