ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯ ನಟ ಉದಯ ಕುಮಾರ್ ಪತ್ನಿ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಧೃವತಾರೆ, ನಟ ದಿವಂಗತ ಉದಯಕುಮಾರ್‌ ಅವರ ಪತ್ನಿ ಸುಶೀಲಾ ದೇವಿ (84) ಅವರು ಬುಧವಾರ ಅನಾರೋಗ್ಯದಿಂದ ನಿಧನರಾದರು.

ಉದಯಕುಮಾರ್‌ ಅವರು ಸ್ಥಾಪಿಸಿದ್ದ ಉದಯಕಲಾ ನಿಕೇತನ ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದ ಅವರು ನಟನೆ, ನೃತ್ಯ, ಸಂಗೀತ ತರಬೇತಿ ನೀಡುತ್ತಿದ್ದರು. 1960–70ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮೇರುನಟನಾಗಿ ಸಾಧನೆ ಮಾಡಿದ ‘ಕಲಾಕೇಸರಿ’ ಉದಯ ಕುಮಾರ್‌ ನೆನಪಿನಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ್ದರು.

ಸುಶೀಲಾ ದೇವಿ ಅವರಿಗೆ ಪುತ್ರಿಯರಾದ ವರ್ಧಿನಿ ಮೂರ್ತಿ, ರೇಣುಕಾಬಾಲಿ ಉದಯ ಕುಮಾರ್ ಇದ್ದಾರೆ. ಉದಯಕುಮಾರ್‌ ಅವರ ಮೊದಲ ಪತ್ನಿ ಕಮಲಮ್ಮ 2019ರ ಡಿ. 11ರಂದು ನಿಧನರಾಗಿದ್ದರು.

Edited By : Vijay Kumar
PublicNext

PublicNext

09/09/2021 07:27 am

Cinque Terre

39.85 K

Cinque Terre

1