ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಸಾಯಿ ಪಲ್ಲವಿ

ಸೂಕ್ಷ್ಮ ವಿಷಯವಾಧರಿತ ಸಿನಿಮಾಗಳ ನಿರೀಕ್ಷೆ ಹುಟ್ಟಿಸಿರುವ ನಿರ್ದೇಶಕ ಮಂಸೋರೆ ತಮ್ಮ ಮಂದಿನ ಸಿನಿಮಾವನ್ನು ದಕ್ಷಿಣ ಭಾರತದ ಸ್ಟಾರ್ ನಟಿಯೊಟ್ಟಿಗೆ ಮಾಡಲಿದ್ದಾರೆ.

ಮಲಯಾಳಂನ 'ಪ್ರೇಮಂ' ಸಿನಿಮಾ ಮೂಲಕ ನಾಯಕಿಯಾಗಿ ಆ ನಂತರ ತಮ್ಮ ಅದ್ಭುತ ನಟನೆ ಹಾಗೂ ನೃತ್ಯದಿಂದ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಸಾಯಿ ಪಲ್ಲವಿ ಜೊತೆಗೆ ಮಂಸೋರೆ ಸಿನಿಮಾ ಮಾಡುವ ಎಲ್ಲ ಸಾಧ್ಯತೆಗಳು ಕಂಡು ಬಂದಿವೆ

'ಆಕ್ಟ್ 1987' ಸಿನಿಮಾದ ಯಶಸ್ಸಿನಿಂದಾಗಿ ಮಂಸೋರೆಯೊಟ್ಟಿಗೆ ಸಿನಿಮಾ ಮಾಡಲು ಹಲವು ನಿರ್ಮಾಪಕರು ಸಂಪರ್ಕಿಸಿದ್ದು, ಅವರಲ್ಲೊಬ್ಬರಿಗಾಗಿ ಮಾಡಲಾಗುತ್ತಿರುವ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಲಿದ್ದಾರೆ.

Edited By : Nagaraj Tulugeri
PublicNext

PublicNext

19/08/2021 03:44 pm

Cinque Terre

35.44 K

Cinque Terre

0