ನಾಥೂರಾಮ್ ಘೋಡ್ಸೆ ದೇಶಪ್ರೇಮಕ್ಕೆ ಜೈ ಎಂದು ಟ್ವೀಟ್ ಮಾಡಿದ್ದ ಸ್ಯಾಂಡಲ್ ವುಡ್ ನಟಿ ಅನಿತಾ ಭಟ್ ಈಗ ಮತ್ತೊಂದು ಅಂತದ್ದೇ ಟ್ವೀಟ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿ ಸದ್ದು ಮಾಡಿದ್ದಾರೆ.
ನಟಿ ಅನಿತಾ ಭಟ್ ಮಾಡಿದ ಟ್ವೀಟ್ ಇಲ್ಲಿದೆ.
ಭಾರತ ದೇಶದಲ್ಲಿ ಹುಟ್ಟಿ, ಭಾರತೀಯಳಾದ ನನ್ನದು ಹಿಂದೂ ಧರ್ಮ ಹಾಗು ನಾನು ಹಿಂದುತ್ವವನ್ನ ಅನುಸರಿಸ್ತಾ ಇದ್ದೀನಿ.
ನನ್ನ ಧರ್ಮ ನನ್ನ ಹೆಮ್ಮೆ
ನನ್ನ ದೇಶ ನನ್ನ ಪ್ರಾಣ
ಜೈ ಭಾರತ
ವಿಶೇಷ ಸೂಚನೆ -
( ಬುದ್ದಿಜೀವಿಗಳಿಗೆ ನನ್ನ ಈ ಟ್ವೀಟ್ ಇಂದ ನೋವಾದ್ರೆ ನಾನು ಜವಾಬ್ದಾರಿ ಅಲ್ಲ )
ಘೋಡ್ಸೆ ಪರವಾಗಿ ಅನಿತಾ ಭಟ್ ಅವರು ಮಾಡಿದ ಟ್ವೀಟ್ ಬಗ್ಗೆ ಪರ-ವಿರೋಧ ಚರ್ಚೆಯಾಗಿತ್ತು. ಹಾಗೂ ಮಾಧ್ಯಮಗಳಲ್ಲೂ ವರದಿಯಾಗಿತ್ತು.
PublicNext
19/08/2021 01:31 pm