ಹೈದರಾಬಾದ್: ಚಿತ್ರೀಕರಣ ವೇಳೆ ಗಾಯಗೊಂಡಿದ್ದ ಬಹುಭಾಷಾ ನಟ ಪ್ರಕಾಶ ರೈ ಸದ್ಯ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆ ನಂತರ ಜಿಮ್ ಗೆ ತೆರಳಿದ್ದ ಅವರು ಅಲ್ಲಿ ತೆಲುಗು ಚಿತ್ರರಂಗದ ಹಿರಿಯ ನಟ ಮೆಗಾಸ್ಟಾರ್ ಚಿರಂಜೀವಿ ಅವರನ್ನ ಭೇಟಿಯಾಗಿದ್ದಾರೆ.
ನಿನ್ನೆ ಮಂಗಳವಾರ ಜಿಮ್ ಗೆ ಭೇಟಿ ನೀಡಿದ್ದ ಅವರು, ಚಿರಂಜೀವಿಯನ್ನು ಭೇಟಿ ಮಾಡಿ ಅವರೊಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನೂ ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮುಂಜಾನೆ ಬಾಸ್ ಅವರನ್ನು ಜಿಮ್‍ನಲ್ಲಿ ಭೇಟಿ ಮಾಡಿದೆ. ಚಿತ್ರರಂಗದಲ್ಲಿ ಸಮಸ್ಯೆಗಳನ್ನು ಸರಿಪಡಿಸುವ ಜವಾಬ್ದಾರಿ ಹೊತ್ತಿದ್ದ ಅವರಿಗೆ ಧನ್ಯವಾದ. ನೀವು ಸದಾ ಉತ್ಸಾಹ ತುಂಬುವ ಅಣ್ಣಯ್ಯ. ಅವರನ್ನು ಪಡೆಯಲು ನಾವು ಅದೃಷ್ಟ ಮಾಡಿದ್ದೇವೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ
PublicNext
18/08/2021 07:35 am