ಬೆಂಗಳೂರು : ಸ್ವಾತಂತ್ರ್ಯೋತ್ಸವ ದಿನಕ್ಕೆ ಅಪ್ಪು ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಅಪ್ಪು ನಟಿಸುತ್ತಿರುವ ಜೇಮ್ಸ್ ಚಿತ್ರದ ನ್ಯೂ ಲುಕ್ ರೀವಿಲ್ ಮಾಡಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಅವರು ಪುನೀತ್ ರಾಜ್ಕುಮಾರ್ 'ಜೇಮ್ಸ್' ಚಿತ್ರಕ್ಕೆ ಆಯಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೇ ಶೂಟಿಂಗ್ ಮುಕ್ತಾಯವಾಗಿದೆ. ಇದೀಗ ಚಿತ್ರತಂಡದಿಂದ ಅಭಿಮಾನಿಗಳಿಗೆ ಬಂಪರ್ ಗಿಫ್ಟ್ ಸಿಕ್ಕಿದ್ದು, ಸಿನಿಮಾ ಫೋಸ್ಟರ್ ರಿಲೀಸ್ ಆಗಿದೆ.
ಸದ್ಯ ಬಿಡುಗಡೆಯಾಗಿರುವ ಲುಕ್ ನಲ್ಲಿ ಶಸ್ತ್ರಧಾರಿ ಸೈನಿಕರ ಮಧ್ಯದಲ್ಲಿ ಪುನೀತ್ ರಾಜ್ ಕುಮಾರ್ ನಿಂತಿದ್ದಾರೆ. ಸೈನಿಕರ ಜತೆ ಪುನೀತ್ ಕೂಡ ಕಪ್ಪನೆಯ ಬಟ್ಟೆ ತೊಟ್ಟು ಕಾಣಿಸಿಕೊಂಡಿದ್ದಾರೆ. 'ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್' ಎನ್ನುವ ಕ್ಯಾಪ್ಶನ್ ಅನ್ನು ಪೋಸ್ಟರ್ ಗೆ ನೀಡಲಾಗಿದೆ.
PublicNext
15/08/2021 06:13 pm