ರಾಮನಗರ: ತಮ್ಮದೇ ಚಿತ್ರದ ಶೂಟಿಂಗ್ ಅವಘಡದಿಂದ ಫೈಟ್ ಮಾಸ್ಟರ್ ಸಾವಿಗೀಡಾಗಿದ್ದರೆ. ಆದರೆ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಇಂದು ಇನ್ಸ್ಟಾಗ್ರಾಂನಲ್ಲಿ ತಮ್ಮ ಪೋಟೋವನ್ನು ಪೋಸ್ಟ್ ಮಾಡಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಹೌದು. ಬಿಡದಿ ಬಳಿ ಹೋಬಳಿಯ ಜೋಗರಪಾಳ್ಯದಲ್ಲಿ 'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಸೋಮವಾರ ಫೈಟರ್ ವಿವೇಕ್(35) ಮೃತಪಟ್ಟಿದ್ದಾರೆ. ಆದರೆ ರಚಿತಾ ರಾಮ್ ಅವರು ಮಾತ್ರ ಈ ಬಗ್ಗೆ ಒಂದೇ ಒಂದು ಮಾತನ್ನಾಡಿಲ್ಲ. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು, "ನಿಮ್ಮ ಸಿನಿಮಾದಲ್ಲಿ ಅವಘಡ ಸಂಭವಿಸಿದ್ದರೆ, ನೀವು ನಿಮ್ಮ ಫೋಟೋ ಪೋಸ್ಟ್ ಮಾಡಿದ್ದೀರಲ್ಲ ನಾಚಿಕೆ ಆಗ್ಬೇಕು. ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ" ಎಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತ ರಚಿತಾ ರಾಮ್, "ವಿದ್ಯುತ್ ಅವಘಡದಿಂದ ಸಾವಿಗೀಡಾದ ಫೈಟರ್ ವಿವೇಕ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
PublicNext
10/08/2021 03:36 pm