ಟ್ರೋಫಿ ಗೆಲ್ಲಲು ಇನ್ನು ಒಂದು ವಾರ ಇದೆ ಎನ್ನುವಾಗ ಮನೆಯಿಂದ ಹೊರಗಡೆ ಹೋಗಬೇಕು ಎಂದರೆ ಬೇಸರ ಆಗುವುದು ಎಂದು ಸ್ಪರ್ಧಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ. ಇದರ ಮಧ್ಯೆ ಇಂದು ನಟಿ ಶುಭಾ ಪೂಂಜೆ ಫಿನಾಲೆಗೆ ಇನ್ನು ಒಂದು ವಾರ ಬಾಕಿ ಇರುವಾಗಲೇ ದೊಡ್ಮನೆಯಿಂದ ಹೊರಬಂದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 8 ಗ್ರ್ಯಾಂಡ್ ಫಿನಾಲೆ ಆಗಸ್ಟ್ 8ರಂದು ನಡೆಯಲಿದೆ. ಐವರು ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಗೆ ತಲುಪಲಿದ್ದಾರೆ. ಫಿನಾಲೆ ಬರುವ ಮುನ್ನ ಮೂವರು ಸ್ಪರ್ಧಿಗಳು ಎಲಿಮಿನೇಟ್ ಆಗಬೇಕು. ಹೀಗಾಗಿ ಶನಿವಾರವೇ ಎಲಿಮಿನೇಶನ್ ನಡೆದಿದೆ.
ಟ್ವಿಸ್ಟ್ ನೀಡುವ ಸಲುವಾಗಿ ಶನಿವಾರವೇ ಎಲಿಮಿನೇಶನ್ ನಡೆದಿದೆ. ಇನ್ನು ಮುಂದಿನ ವಾರದ ಮಧ್ಯದಲ್ಲಿ ಕೂಡ ಎಲಿಮನೇಶನ್ ನಡೆಯಲಿದೆ. 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಶುಭಾ ಪೂಂಜಾ ಔಟ್ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ಘೋಷಣೆ ಮಾಡಿದ್ದರು.
ಶುಭಾ ಪೂಂಜಾ ಮನೆಯಿಂದ ಹೊರಗಡೆ ಹೋಗುತ್ತಿರುವುದನ್ನು ಕಂಡು ಮಂಜು ಪಾವಗಡ, ದಿವ್ಯಾ ಉರುಡುಗ ಕಣ್ಣೀರು ಹಾಕಿದ್ದಾರೆ.
PublicNext
31/07/2021 11:14 pm