ಮುಂಬೈ : ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರೆಟಿಗಳ ಕಾಲು ಎಳೆಯುವ ಪ್ರವೃತ್ತಿ ಮುಂದುವರೆದಿದೆ ಕೆಲವು ಸಂದರ್ಭಗಳಲ್ಲಿ ಸೆಲೆಬ್ರೆಟಿಗಳು ಟ್ರೋಲಿಗರಿಗೆ ಒಳ್ಳೆಯ ಆಹಾರವಾಗಿಬಿಡುತ್ತಾರೆ. ಸದ್ಯ ಬಿಟೌನ್ ನ ಕೃಷ್ಣ ಸುಂದರಿ ಪ್ರಿಯಾಂಕಾ ಚೆಂಡಿನಾಕಾರದಲ್ಲಿ ಡ್ರಸ್ ಮಾಡಿದ್ದಾರೆ. ಈ ಹೊಸ ಬಗೆಯ ಉಡುಗೆಯ ಚಿತ್ರಗಳನ್ನು ತಮ್ಮ ಇನ್ಸ್ಟಾ, ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಪಿಗ್ಗಿ ನ್ಯೂ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲರೂ ಖುಷಿಯಿಂದ ಲೈಕ್ ಒತ್ತಿದ್ದಾರೆ. ಇನ್ನು ಕೆಲವರು ಪ್ರಿಯಾಂಕಾ ಅವರ ಹೊಸ ಲುಕ್ ಗೇಲಿ ಮಾಡಿದ್ದಾರೆ. ವಾಹನಗಳ ಹಾರ್ನ್, ಕ್ರಿಕೆಟ್ ಬಾಲ್, ಕಸದ ಗಂಟು, ಪಟಾಕಿಗಳು ಹೀಗೆ ಹಲವು ಬಗೆಯ ಮಿಮ್ಸ್ ಮೂಲಕ ಕಾಲೆಳೆದಿದ್ದಾರೆ.
ತಮ್ಮ ಹೊಸ ಲುಕ್ ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದನ್ನು ಪ್ರಿಯಾಂಕಾ ಎಂಜಾಯ್ ಮಾಡಿದ್ದಾರೆ. ಕೆಲವೊಂದಿಷ್ಟು ಮಿಮ್ಸ್ ಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡು, ‘ನೋಡಲು ತುಂಬ ತಮಾಷೆಯಾಗಿದೆ. ನನ್ನ ಈ ದಿನ ಸುಂದರವಾಗಿಸಿದ್ದಕ್ಕೆ ಧನ್ಯವಾದ’ ಎಂದಿದ್ದಾರೆ.
ಇನ್ನು ಪ್ರಿಯಾಂಕಾ ಚೋಪ್ರಾ ಅವರು ಡ್ರಸ್ ವಿಷಯವಾಗಿ ಟ್ರೋಲ್ ಆಗುವುದು ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಪಿಗ್ಗಿ ಫ್ಯಾಷನ್ ಅಣಕಿಸುವ ಮಿಮ್ಸ್ ಗಳು ಹರಿದಾಡಿದ್ದವು.
PublicNext
24/02/2021 03:28 pm