ಮುಂಬೈ : ವಿವಾದಗಳಿಂದಲೇ ಸುದ್ದಿಯಲ್ಲಿರುವ ನಟಿ ರಾಖಿ ಸಾವಂತ್ ಬಿಗ್ ಬಾಸ್ ಮನೆಯಿಂದ ಹೊರ ಬಂದು ತನ್ನ ಪತಿ ರಿತೇಶ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ರಿತೇಶ್ ವಿವಾಹಿತ ಅಂತ ಮೊದಲೇ ತಿಳಿದಿದ್ರೆ ನಾನು ಆತನ ಸಂಸಾರವನ್ನ ಒಡೆಯುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿಯೂ ರಾಖಿ ತಮ್ಮ ಖಾಸಗಿ ಜೀವನದ ಹಲವು ವಿಚಾರಗಳನ್ನ ಹಂಚಿಕೊಂಡಿದ್ದರು. ಮದುವೆಯ ವಿಷಯವನ್ನ ಮುಚ್ಚಿಡುವ ಅವಶ್ಯಕತೆ ನನಗಿರಲಿಲ್ಲ. ಆದ್ರೆ ಕಾರಣಾಂತರಗಳಿಂದ ವಿಷಯವನ್ನ ಹೇಳಿಕೊಳ್ಳಲಾಗಲಿಲ್ಲ. ತುಂಬಾ ಪ್ರೀತಿಸಿ, ಇಷ್ಟಪಟ್ಟು ರಿತೇಶ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟೆ. ಆದ್ರೆ ಅವನ ಜೊತೆ ಬಾಳುವ ಅದೃಷ್ಟ ನನಗಿಲ್ಲ ಎಂದು ಹೇಳುತ್ತಾ ಮಂಕಾದ್ರು.
ಬಿಗ್ ಬಾಸ್ ಪ್ರವೇಶಿಸಿದ ಬಳಿಕ ತಮ್ಮದೇ ಮಾತು, ಡ್ಯಾನ್ಸ್, ಕಿರಿಕಿರಿ, ಜಗಳದಿಂದ ಮನರಂಜನೆ ಕಳೆದುಕೊಂಡಿದ್ದ ಮನೆಗೆ ಹೊಸ ಹುರುಪು ನೀಡಿದ್ದರು. ಸ್ಪರ್ಧಿಗಳಿಗೆ ನೇರವಾಗಿ ತಿರುಗೇಟು ನೀಡುವ ಮೂಲಕ ವೀಕ್ಷಕರಿಗೆ ಇಷ್ಟವಾಗಿದ್ದರು. ಆದ್ರೆ ಫೈನಲ್ ನಲ್ಲಿ ಬಿಗ್ ಬಾಸ್ ನೀಡಿದ 14 ಲಕ್ಷ ರೂ. ಪಡೆದು ಕೊನೆ ಹಂತದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದರು. ಮನೆ ಪ್ರವೇಶಿಸಿದಾಗಿನಿಂದಲೂ ತನ್ನತನ ಬಿಟ್ಟುಕೊಡದ ನಟಿ ರುಬಿನಾ ಬಿಗ್ ಬಾಸ್-14ರ ವಿನ್ನರ್ ಆದರು.
PublicNext
23/02/2021 11:42 am