ಪ್ರೇಮಿಗಳ ದಿನದಂದು ಡಾರ್ಲಿಂಗ್ ಜೋಡಿ ಕೃಷ್ಣ ಮತ್ತು ಮಿಲನಾ ಅದ್ದೂರಿಯಾಗಿ ಹಸಮಣೆ ಏರಿದ್ದು ಇದೀಗ ಈ ಜೋಡಿ ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಿದ್ದು, ಕ್ವಾಲಿಟಿ ಟೈಂ ಸ್ಪೆಂಡ್ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪ್ರೀತಿಸಿತ್ತಿದ್ದ ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಈಗ ಸತಿಪತಿಗಳಾಗದ್ದಾರೆ.
ಲವ್ ಮಾಕ್ಟೈಲ್ ಜೋಡಿಯ ಮದುವೆಗೆ ಅಭಿಮಾನಿಗಳು ಶುಭ ಕೋರಿದರು.ಡಾರ್ಲಿಂಗ್ ಕೃಷ್ಣ ತಮ್ಮ ಮನದರಸಿಯನ್ನ ವಿವಾಹವಾದ ದಿನದಂದೇ ಲವ್ ಮಾಕ್ಟೈಲ್ 2 ಹಾಡೊಂದನ್ನ ರಿಲೀಸ್ ಮಾಡಿ ಫ್ಯಾನ್ಸ್ ಗೆ ಸರ್ಪ್ರೈಸ್ ಕೊಟ್ಟಿದ್ರು. ಈಗಾಗಲೇ ಈ ಹಾಡು ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಇನ್ನು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋ ಈ ಕ್ಯೂಟ್ ಕಪಲ್ ಈಗ ಹನಿಮೂನ್ ನಲ್ಲಿ ಬ್ಯುಸಿ ಇದ್ದಾರೆ. ಈ ಸೆಲೆಬ್ರಿಟಿ ಜೋಡಿ ಹನಿಮೂನ್ ಗೆ ಆಯ್ಕೆ ಮಾಡ್ಕೊಂಡಿರೋ ಜಾಗ ಸೆಲೆಬ್ರಿಟೀಸ್ ಗಳ ಹಾಟ್ ಫೇವರೇಟ್ ಅಂತಾನೇ ಕರೆಸಿಕೊಳ್ಳೋ ಮಾಲ್ಡೀವ್ಸ್. ಈ ಡಾರ್ಲಿಂಗ್ ಜೋಡಿ ಮಾಲ್ಡೀವ್ಸ್ ನಲ್ಲಿ ತಮ್ಮ ಸುಂದರ ಕ್ಷಣಗಳನ್ನ ಕಳೆಯುತ್ತಿದ್ದಾರೆ.
ಮಾಲ್ಡೀವ್ ಪ್ರವಾಸವನ್ನ ಎಂಜಾಯ್ ಮಾಡುತ್ತಿರೋ ಲವ್ ಮಾಕ್ಟೈಲ್ ಜೋಡಿ ಒಂದಷ್ಟು ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈಗಾಗಲೇ ಲವ್ ಮಾಕ್ಟೇಲ್ 2 ಚಿತ್ರದ ಬಹುತೇಕ ಚಿತ್ರೀಕರಣವನ್ನ ಮುಗಿಸಿದ ಜೋಡಿ ಹನಿಮೂನ್ ಬಳಿಕ ಚಿತ್ರದ ಉಳಿದ ಭಾಗದ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ.
PublicNext
20/02/2021 11:23 am