ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ರಾಜ್ ಸೌಂಡ್ಸ್ ಅಂಡ್ ಲೈಟ್ಸ್" ಸಿನಿಮಾ ಹೊಸ ಪ್ರಯತ್ನದಲ್ಲಿ ರಾಜ್ ಬಿ ಶೆಟ್ಟಿ

ಹೊಸಬರು ಕನ್ನಡ ಚಿತ್ರರಂಗವನ್ನು ನಿಧಾನವಾಗಿ ಆವರಿಸಿಕೊಳ್ಳಲಾರಂಭಿಸಿದಂತೆ ಸಿನಿಮಾಗಳ ಟೈಟಲ್ ಒಳಗೂ ಸಹ ಹೊಸ ಶೈಲಿ ವಿಭಿನ್ನತೆ ಕಂಡು ಬರುತ್ತಿದ್ದು ಆ ಸಿನಿಮಾಗಳು ಯಶಸ್ಸಿನ ಹಾದಿ ಹಿಡಿದಿವೆ. ಹೌದು ! ಬೆಳ್ಳಿತೆರೆಯಲ್ಲಿ ಒಂದು ಹೊಸ ಶೈಲಿಯ ಸಂಚಲನ ಮೂಡಿಸಿದ್ದ "ಒಂದು ಮೊಟ್ಟೆಯ ಕಥೆ" ಚಿತ್ರ ತಂಡದವರು ಹೊಸ ಸಿನಿಮಾ ನಿರ್ಮಾಣದ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಆ ಹೊಸ ಸಿನಿಮಾ ಟೈಟಲ್ ಸಹ ಈಗಾಗಲೇ ಲಾಂಚ್ ಮಾಡಿದ್ದು ಅಷ್ಟೇ ಕುತೂಹಲವನ್ನು ಸಿನಿ ಪ್ರೀಯರಲ್ಲಿ ಸೃಷ್ಟಿಸಿದ್ದಾರೆ.

ಅಂದಹಾಗೇ ಈ ಸಿನಿಮಾ ಹೆಸರು 'ರಾಜ್ ಸೌಂಡ್ಸ್ ಅಂಡ್ ಲೈಟ್ಸ್' ಎಂಬುದಾಗಿದೆ. ಒಂದು ಮೊಟ್ಟೆಯ ಕಥೆ ಸಿನಿಮಾವನ್ನು ಯಶಸ್ವಿಯಾಗಿಸಿದ್ದ ರಾಜ್.ಬಿ ಶೆಟ್ಟಿ ಈ ಹೊಸ ಚಿತ್ರಕ್ಕೆ ಕ್ರಿಯಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಇವರಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಾಹುಲ್ ನವೀನ್ ಈ ಸಿನಿಮಾ ನಿರ್ದೇಶಿಸುವ ಜವಾಬ್ದಾರಿ ಪಡೆದುಕೊಂಡಿದ್ದಾರೆ.

ಈ ಸಿನಿಮಾಗಾಗಿ ಮದುವೆ ಸೆಟ್ಟೋಂದನ್ನು ಹಾಕಲಾಗಿದ್ದು, ಕನ್ನಡ ಮತ್ತು ತುಳು ಎರೆಡು ಭಾಷೆಗಳಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಪಕ್ಕಾ ಹಾಸ್ಯದ ಮಜಲನ್ನೇ ಮುಖ್ಯ ಮಾಡಿಕೊಂಡಿರುವ ಚಿತ್ರತಂಡದ ಎಲ್ಲ ವಿಚಾರಗಳ ಬಗ್ಗೆ ರಾಜ್.ಬಿ ಶೆಟ್ಟಿ ಕಾರ್ಯ ನಿರ್ವಹಿಸುತಿದ್ದಾರೆ. ಒಂದು ಮೊಟ್ಟೆಯ ಕಥೆ ನಂತರದಲ್ಲಿ ಮತ್ತೆ ಸಿನಿಮಾ ತಂಡ ಹೊಸ ಸಿನಿಮಾ ಮೂಲಕ ನಗುವಿನ ರಸದೌತನ ನೀಡಲು ಸಜ್ಜಾಗಿದ್ದು ಪ್ರೇಕ್ಷಕನಿಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.

Edited By : Nirmala Aralikatti
PublicNext

PublicNext

18/02/2021 04:06 pm

Cinque Terre

43.5 K

Cinque Terre

1