ಬೆಂಗಳೂರು: ಪವರ್ ಸ್ಟಾರ್ ಹಂಚಿಕೊಂಡಿರುವ ಬ್ಯಾ ಡೈವ್ ನ ಒಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ವಿಡಿಯೋ ಹಂಚಿಕೊಂಡಿರುವ ಪುನೀತ್ ರಾಜ್ ಕುಮಾರ್ ‘ದಯವಿಟ್ಟು ಯಾರೂ ಇಂಥ ಸಾಹಸ ಮಾಡಬೇಡಿ..’ ಎಂದು ಮೊದಲು ಎಚ್ಚರಿಕೆ ಕೊಟ್ಟೇ ಹೊಸ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ನಟನೆಯಲ್ಲಿ ಮಾತ್ರವಲ್ಲದೆ ಸಾಹಸ ಕ್ರೀಡೆ, ಸೈಕ್ಲಿಂಗ್ ಮತ್ತು ಫಿಟ್ನೆಸ್ ನಲ್ಲೂ ಅವರಿಗೆ ಅಷ್ಟೇ ಆಸಕ್ತಿ. ಕೆಲವು ದಿನಗಳ ಹಿಂದೆ, ಕಾರವಾರ ಬಳಿಯ ನೇತ್ರಾಣಿ ದ್ವೀಪಕ್ಕೆ ಹೋಗಿದ್ದ ಪುನೀತ್, ಬೋಟ್ ನಿಂದ ಬ್ಯಾಕ್ಫ್ಲಿಪ್ ಮಾಡಿ ಸಮುದ್ರಕ್ಕೆ ಜಿಗಿದಿದ್ದಾರೆ. ಪುನೀತ್ ಅವರ ಈ ಸಾಹಸಕ್ಕೆ ಅವರ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ಯಾಕ್ ಫ್ಲಿಪ್ ಮಾಡುವುದರಲ್ಲಿ ನಿಸ್ಸೀಮರಾಗಿರುವ ಪುನೀತ್, ಗೋಕರ್ಣ ಬೀಚ್ ನಲ್ಲಿ ಇದೇ ರೀತಿ ಬ್ಯಾಕ್ ಫ್ಲಿಪ್ ಮಾಡುವ ವಿಡಿಯೋವೊಂದನ್ನು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಿದ್ದರು. ಈಗ, ‘ಯಾರೂ ಇಂತಹ ಸಾಹಸಕ್ಕೆ ಕೈಹಾಕಬೇಡಿ’ ಎಂಬ ಮನವಿಯೊಂದಿಗೆ ಈ ವಿಡಿಯೋ ಹಂಚಿಕೊಂಡಿದ್ದಾರೆ.
PublicNext
18/02/2021 12:53 pm