ಲಾಕ್‌ಡೌನ್ ಆದ್ಮೇಲೆ 1980 ಸಿನಿಮಾದ ಚಿತ್ರೀಕರಣ ಆರಂಭಿಸಿದ್ದ ನಟಿ ಪ್ರಿಯಾಂಕಾ ಉಪೇಂದ್ರ ಈಗ ಶೂಟಿಂಗ್ ಮುಗಿಸಿದ್ದಾರೆ. ಇದೀಗ, 1980 ಸಿನಿಮಾದ ಟೀಸರ್ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಸಂಪೂರ್ಣವಾಗಿ ರೆಟ್ರೋ ಶೈಲಿಯಲ್ಲಿ ಈ ಸಿನಿಮಾ ತಯಾರಾಗುತ್ತಿರುವುದು ವಿಶೇಷ. ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಬಹುತೇಕ ಶೂಟಿಂಗ್ ನಡೆದಿದೆ.
ಸ್ವತಃ ಚಿತ್ರತಂಡ ಪ್ರಕಟಿಸಿರುವ ಪ್ರಕಾರ ಫೆಬ್ರವರಿ 22 ರಂದು 1980 ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಸಂಜೆ 6 ಗಂಟೆ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಯಾರು ಬರಲಿದ್ದಾರೆಂಬ ಕುತೂಹಲ ಇದೆ.
PublicNext
16/02/2021 04:20 pm