ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಟಿ ಅಮೂಲ್ಯ, ಜಗದೀಶ್ ದಂಪತಿ 2.50 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ.
ದೇಣಿಗೆ ನೀಡಿರುವ ರಸೀದಿಗಳ ಫೋಟೋವನ್ನು ಅಮೂಲ್ಯ, ಜಗದೀಶ್ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ''ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ದೇಶಾದ್ಯಂತ ನಡೆಯುತ್ತಿದ್ದು, ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಮನೆಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಅವರು ಆಗಮಿಸಿದ್ದರು. ಪ್ರತಿ ವರ್ಷವೂ ಜನ್ಮದಿನಾಚರಣೆಗಾಗಿ ಖರ್ಚು ಮಾಡುತ್ತಿದ್ದ ಹಣಕ್ಕೆ ನಮ್ಮಿಂದಾದ ಮೊತ್ತವನ್ನು ಸೇರಿಸಿ ಶ್ರೀರಾಮ ಮಂದಿರಕ್ಕಾಗಿ ಅರ್ಪಿಸಿದೆವು. ಈ ಕ್ಷಣ ನಮಗೆ ಅತ್ಯಂತ ಸಾರ್ಥಕತೆಯ ಕ್ಷಣವೆನಿಸಿತು ಜೈ ಶ್ರೀರಾಮ್'' ಎಂದು ಬರೆದುಕೊಂಡಿದ್ದಾರೆ.
ಜಗದೀಶ್ ಅವರು 1.50 ಲಕ್ಷ ರೂ. ಹಾಗೂ ಅವರ ತಂದೆ ಜಿ.ಎಚ್. ರಾಮಚಂದ್ರ ಅವರ ಹೆಸರಿನಲ್ಲಿ 1 ಲಕ್ಷ ರೂ.ವನ್ನು ರಾಮಂದಿರ ನಿರ್ಮಾಣಕ್ಕೆ ನೀಡಲಾಗಿದೆ. ಅಮೂಲ್ಯ ದಂಪತಿಯ ಈ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
25/01/2021 11:51 am