ತಮಿಳುನಾಡಿನ ನೀಲಗಿರಿಯಲ್ಲಿ ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ಆನೆಯೊಂದಕ್ಕೆ ಬೆಂಕಿ ಹಚ್ಚಿ ಕ್ರೂರತೆ ಮೆರದಿದ್ದರು. ಈ ಹೃದಯವಿದ್ರಾವಕ ಘಟನೆಗೆ ನಟಿ ರಮ್ಯಾ ಗರಂ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ರಮ್ಯಾ, "ನಾವು ಯಾಕೆ ಇಷ್ಟೊಂದು ಕ್ರೂರಿಗಳಾಗುತ್ತಿದ್ದೇವೆ? ಯಾಕೆ ಕರುಣೆಯಿಂದ ಇರುವುದಿಲ್ಲ? ಎಲ್ಲ ಜೀವಿಗಳು ಭೂಮಿಯನ್ನು ಆಧರಿಸಿವೆ? ಎಲ್ಲರೂ ಶಾಂತಿಯುತವಾಗಿ ಬದುಕಬೇಕು ಎಂದು ನಾವು ಯಾವಾಗ ಕಲಿಯುತ್ತೇವೆ? ಮಾನವರು ಜಗತ್ತಿನಲ್ಲಿ ಬದುಕಲು ಕೆಟ್ಟ ಜೀವಿಗಳು. ನನಗೆ ತುಂಬಾ ದುಃಖವಾಗಿದೆ. ಎಲ್ಲವೂ ಸರಿ ಇದೆ ಅಂತ ನಾವು ಸುಮ್ಮನಿರಲಾಗೋದಿಲ್ಲ. ನಾವು ಮಾತನಾಡದಿದ್ದರೆ, ಕ್ರಮ ಕೈಗೊಳ್ಳದಿದ್ದರೆ ಜಗತ್ತು ಹಾಳಾಗುವುದು. ದಯವಿಟ್ಟು ಝೂ, ಸಫಾರಿಗಳಿಗೆ ಹೋಗೋದನ್ನು ನಿಲ್ಲಿಸಿ. ಈಗಾಗಲೇ ನಾವು ಅವರ ಜಾಗ, ಆಹಾರ, ನೀರನ್ನು ಪಡೆದಿದ್ದೇವೆ" ಎಂದು ಬರೆದುಕೊಂಡಿದ್ದಾರೆ.
"ಮಾನವನ ಕ್ರೂರತೆಗೆ ಈಗಾಗಲೇ ಪ್ರಾಣಿಗಳ ಬದುಕು ಚಿಂತಾಜನಕವಾಗಿದೆ. ಅವುಗಳು ನಮ್ಮನ್ನು ನೋಡಲು ಇಷ್ಟಪಡುವುದಿಲ್ಲ. ನಿಮ್ಮ ಕೃತ್ಯಕ್ಕೆ ಕಾಡಿನಲ್ಲಿ ರೆಸಾರ್ಟ್ಸ್‌ಗಳು ತಲೆ ಎತ್ತಿವೆ. ದುರಾಸೆ, ಸ್ವಾರ್ಥದಿಂದ ಕೂಡಿರಬೇಡಿ. ಪ್ರಾಣಿಗಳಿಗೂ ಪ್ರೀತಿ, ಗೌರವ ಪಡೆಯುವ, ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುವ ಅರ್ಹತೆಯಿದೆ. ನೀವು ಪ್ರಾಣಿಗಳನ್ನು ಇಷ್ಟಪಟ್ಟರೆ ಅವರನ್ನು ಅವರ ಪಾಡಿಗೆ ಬಿಡಿ" ಎಂದು ರಮ್ಯಾ ಹೇಳಿದ್ದಾರೆ.
PublicNext
24/01/2021 01:49 pm