ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾದ ನಾಯಕಿಯಾಗಿ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿದೆ. ಅಜಯ್ ರಾವ್ ಮುಖ್ಯ ನಾಯಕ ನಟನಾದ ಈ ಚಿತ್ರಕ್ಕೆ "ಐ ಲವ್ ಯೂ ರಚ್ಚು" ಎಂದು ಹೆಸರಿಡಲಾಗಿದೆ.
ಅಜಯ್ ಮತ್ತು ರಚಿತಾ ರಾಮ್ ಕಾಂಬಿನೇಷನ್'ನ ಮೊದಲ ಸಿನಿಮಾ ಇದಾಗಿದೆ. ಈಗಾಗಲೇ ಈ ಚಿತ್ರಕ್ಕೆ ಹೆಸರಾಂತ ನಿರ್ದೇಶಕ ಶಶಾಂಕ್ ಕಥೆ ಬರೆದಿದ್ದಾರೆ. ಅಜಯ್ ರಾವ್ ಮತ್ತು ಶಶಾಂಕ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಕೃಷ್ಣ ಸರಣಿಗಳು ಈಗಾಗಲೇ ಯಶಸ್ಸು ಕಂಡಿವೆ. ಈ ಸಿನಿಮಾ ಕೂಡ ಅಂಥದ್ದೊಂದು ಹೊಸ ಕುತೂಹಲ ಮೂಡಿಸಲಿದೆ.
ಜಿ ಸಿನಿಮಾಸ್ ಪ್ರೊಡಕ್ಷನ್ ಬ್ಯಾನರ್'ನಲ್ಲಿ ಈಗಾಗಲೇ ಹಲವು ಪ್ರತಿಭೆಗಳಿಗೆ ಅವಕಾಶ ನೀಡಿರುವ ನಿರ್ಮಾಪಕ, ನಿರ್ದೇಶಕ ಗುರು ದೇಶಪಾಂಡೆ ಅವರು, ಈ ಸಿನಿಮಾದಲ್ಲೂ ಅದನ್ನು ಮುಂದುವರೆಸಿದ್ದಾರೆ. ಅನೇಕ ಚಿತ್ರಗಳಿಗೆ ಸಹಾಯಕ, ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಶಂಕರ್ ರಾಜ್ ಅವರನ್ನು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರನ್ನಾಗಿ ಮಾಡುತ್ತಿದ್ದಾರೆ. ಗುರು ದೇಶಪಾಂಡೆ ಅವರ ಸಿನಿಮಾದಲ್ಲೂ ಶಂಕರ್ ರಾಜ್ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿರುವುದು ವಿಶೇಷ.
ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿರುವುದು ಹೆಮ್ಮೆಯ ವಿಷಯ. ಶ್ರೀ ಕ್ರಝಿ ಮೈಂಡ್ಸ್ ಚಿತ್ರದ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.
ಜೀ ಸಿನಿಮಾಸ್ ಬ್ಯಾನರ್ ನಲ್ಲಿ ಮೂಡಿ ಬಂದ ಜಂಟಲ್'ಮನ್ 2020ನೇ ಸಾಲಿನಲ್ಲಿ ತೆರೆಕಂಡ ಯಶಸ್ವಿ ಸಿನಿಮಾಗಳಲ್ಲಿ ಒಂದು, ಸದ್ಯ ರೆಡಿ ಆಗುತ್ತಿರುವ ಪೆಂಟಗನ್ ಚಿತ್ರ ಕೂಡ ಭಾರೀ ಸದ್ದು ಮಾಡುತ್ತಿದೆ. ಮೂರನೇ ಚಿತ್ರ ಕೂಡ ಅದೇ ಸಾಲಿನಲ್ಲಿ ನಿಲ್ಲುವ ವಿಶ್ವಾಸ ನಮ್ಮದು ಎನ್ನುತ್ತಾರೆ ಐ ಲವ್ ಯೂ ರಚ್ಚು ಸಿನಿಮಾ ತಂಡದವರು.
PublicNext
22/01/2021 12:33 pm