ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಲ್ಡೀವ್ಸ್ ಪ್ರವಾಸದಲ್ಲಿ ಯಶ್ ಕುಟುಂಬದ ಜಾಲಿ ಮೂಡ್

ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನದಂದು ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಟೀಸರ್​ ಕೂಡ ರಿಲೀಸ್ ಆಗಿ ಈಗಾಗಲೇ ಹೊಸ ದಾಖಲೆ ಸೃಷ್ಟಿಸಿದೆ. ಇದೇ ಖುಷಿಯಲ್ಲಿ ಯಶ್​ ಮಾಲ್ಡೀವ್ಸ್​ ಪ್ರವಾಸ ಕೈಗೊಂಡಿದ್ದಾರೆ.

ಕೊರೊನಾ ವೈರಸ್​ ಅಬ್ಬರ ನಿಧಾನವಾಗಿ ಕಡಿಮೆ ಆಗುತ್ತಿದ್ದಂತೆ ಸ್ಟಾರ್​ ನಟ-ನಟಿಯರು ಮಾಲ್ಡೀವ್ಸ್​ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈಗ ನಟ ಯಶ್​ ಹಾಗೂ ಪತ್ನಿ ರಾಧಿಕಾ ಪಂಡಿತ್​ ಕುಟುಂಬ ಸಮೇತ ಮಾಲ್ಡೀವ್ಸ್​ಗೆ ಪ್ರಯಾಣ ಬೆಳೆಸಿದ್ದಾರೆ. ಮಕ್ಕಳೊಂದಿಗೆ ಜಾಲಿ ಮೂಡಿನಲ್ಲಿದ್ದಾರೆ.

ಉಷ್ಣವಲಯದ ಸ್ವರ್ಗ ಎಂದಿದ್ದರೆ ಅದು ಮಾಲ್ಡೀವ್ಸ್​ ಮಾತ್ರ. ನಾವು ಇಲ್ಲಿಗೆ ಬಂದಿದ್ದೇವೆ ಎಂದು ಯಶ್ ಇನ್​​ಸ್ಟಾಗ್ರಾಂನಲ್ಲಿ​ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಯಶ್-ರಾಧಿಕಾ​ ಮಗಳು ಆಯ್ರಾ ಹಾಗೂ ಮಗ ಯಥರ್ವ್​ ಜೊತೆ ಆನಂದದಿಂದ ಸಮಯ ಕಳೆಯುತ್ತಿರುವ ಫೋಟೋ ಹಾಕಿದ್ದಾರೆ.

Edited By : Nagaraj Tulugeri
PublicNext

PublicNext

19/01/2021 07:30 am

Cinque Terre

90.96 K

Cinque Terre

1