ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ 36 ನೇ ವಸಂತದ ಸಂಭ್ರಮ. ನೇರ ನುಡಿ ಮೂಲಕ ಆಗಾಗ್ಗೆ ಸುದ್ದಿ ಮಾಡುವ ದೀಪಿಕಾ ಬರ್ತ್ ಡೇ ದಿನದಂದು ತಮ್ಮ ಪತಿ ರಣವೀರ್ ಸಿಂಗ್ ಜೊತೆ ಪ್ರೇಮಾಂಕುರವಾದ ಸಂಗತಿಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ದೀಪಿಕಾ, ನಾನು ಮತ್ತು ರಣವೀರ್ ಸಿಂಗ್ ಮೊದಲ ಬಾರಿ ಭೇಟಿಯಾದಾಗ ಗಂಭೀರ ವಿಶ್ವಾಸದ ಸಮಸ್ಯೆಯಿಂದ ಬಳಲುತ್ತಿದ್ದೆ. ರಣವೀರ್ ಇಷ್ಟವಾದರೂ ಸಂಪೂರ್ಣವಾಗಿ ಅವರ ಜೊತೆ ಸ್ನೇಹ ಮುಂದುವರಿಸಲು ನನ್ನ ಮನಸ್ಸು ಒಪ್ಪಿರಲಿಲ್ಲ. ಇದು ಅವರ ಸಮಸ್ಯೆಯಲ್ಲ, ಮತ್ತೊಂದು ಸಂಬಂಧಕ್ಕೆ ನಾನು ಸಿದ್ಧಳಾಗಿದ್ದೇನೆಯೇ ಎಂಬ ಪ್ರಶ್ನೆ ಕಾಡುತ್ತಿತ್ತು. ಏಕೆಂದರೆ, ಇದಕ್ಕೂ ಮುನ್ನ ನಾನು ಹಲವು ರಿಲೇಶನ್‌ಶಿಪ್‌ನಲ್ಲಿದ್ದೆ, ಅವುಗಳಲ್ಲೆಲ್ಲ ನನ್ನ ವಿಶ್ವಾಸ ಮುರಿದು ಬಿದ್ದಿತ್ತು ಎಂದಿದ್ದಾರೆ.
2012 ರಲ್ಲಿ ಭೇಟಿಯಾದಾಗ, ನಮ್ಮ ನಡುವೆ ಏನೋ ಸಂಬಂಧವಿದೆ ಎಂದು ನನಗೆ ತಿಳಿದಿದೆ. ನಾನು ನಿನ್ನನ್ನು ನಿಜವಾಗಿಯೂ ಇಷ್ಟಪಡುತ್ತೇನೆ. ಆದರೆ, ಅದನ್ನು ಮುಕ್ತವಾಗಿಡಲು ನಾನು ಬಯಸುತ್ತೇನೆ. ನಾನು ಈ ಸಂಬಂಧಕ್ಕೆ ಬದ್ಧಳಾಗಿರಲು ಬಯಸುವುದಿಲ್ಲ. ನಾನು ಬೇರೊಬ್ಬ ಹುಡುಗನತ್ತ ಆಕರ್ಷಣೆಗೊಳಗಾದರೆ, ನಾನು ಅದರಲ್ಲಿ ಮುಂದುವರೆಯುತ್ಥೇನೆ , ’ ಎಂದು ದೀಪಿಕಾ ಸಂದರ್ಶನದಲ್ಲಿ ಹೇಳಿದ್ದಾರೆ.
PublicNext
05/01/2021 09:36 pm