ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇತ್ತೀಚೆಗಷ್ಟೇ ಶಿವಸೇನೆ ಪಕ್ಷ ಸೇರಿದ ನಟಿ ಉರ್ಮಿಳಾ ಮಾತೋಂಡ್ಕರ್ ಅವರ ಕಾಲೆಳೆದು ಮಹಾರಾಷ್ಟ್ರ ಸರ್ಕಾರಕ್ಕೆ ಭರ್ಜರಿ ಟಾಂಗ್ ಕೊಟ್ಟಿದ್ದಾರೆ.
ನಟಿ ಉರ್ಮಿಳಾ ಮಾತೋಂಡ್ಕರ್ ಅವರು ಶಿವಸೇನೆ ಸೇರಿದ ಸೇರಿದ ಕೆಲವೇ ದಿನಗಳಲ್ಲಿ ಮುಂಬೈನಲ್ಲಿ 3 ಕೋಟಿ ರೂ. ಮೌಲ್ಯದ ಕಚೇರಿಯನ್ನು ಖರೀದಿಸಿದ್ದಾರೆ. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕಂಗನಾ, ''ಉರ್ಮಿಳಾ ಜೀ, ನಾನು ಕಷ್ಟ ಪಟ್ಟು ದುಡಿದ ಹಣದಲ್ಲಿ ಖರೀದಿಸಿದ್ದ ಕಚೇರಿಯನ್ನು ಕಾಂಗ್ರೆಸ್ ನಾಶ ಮಾಡಿತು. ಬಿಜೆಪಿ ಮನವೊಲಿಸಲು ಹೋಗಿದ್ದಕ್ಕೆ ನನಗೆ ಸಿಕ್ಕಿದ್ದು, 25-30 ಕೇಸ್‌ಗಳು. ನಾನು ಮೂರ್ಖಳಾಗದೆ ನಿಮ್ಮಷ್ಟೇ ಜಾಣೆಯಾಗಿದ್ದರೆ ಕಾಂಗ್ರೆಸ್ಗೆ ಖುಷಿ ಪಡಿಸುತ್ತಿದ್ದೆ. ನಾನದೆಷ್ಟು ಮೂರ್ಖಳು'' ಎಂದು ಪ್ರಶ್ನಿಸಿ ಕಾಲೆಳೆದಿದ್ದಾರೆ.
ಕಂಗನಾ ಟಾಂಗ್‌ಗೆ ಪ್ರತಿಕ್ರಿಯೆ ನೀಡಿರುವ ಉರ್ಮಿಳಾ, ''ನಾನು ಆ ಫ್ಲಾಟ್ ಅನ್ನು 2011ರಲ್ಲಿಯೇ ಖರೀದಿಸಿದ್ದೇನೆ. ರಾಜಕೀಯಕ್ಕೆ ಬರುವ ಮುನ್ನವೇ ನಟನೆಯಿಂದ ಸಂಪಾದಿಸಿದ ಹಣದಲ್ಲಿ ಫ್ಲಾಟ್ ಖರೀದಿಸಿರುವೆ'' ಎಂದು ತಿಳಿಸಿದ್ದಾರೆ.
PublicNext
03/01/2021 09:09 pm