ಪುಷ್ಪ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿತ್ತು ಆ ಚಿತ್ರದ ಹಾಡುಗಳು ಇನ್ನೂ ಎಲ್ಲರ ಬಾಯಲ್ಲಿವೆ. ಸಾಮಾಜಿಕ ಜಾಲತಾಣದಲ್ಲಿ ಪುಷ್ಪ ಚಿತ್ರ ಸಕತ್ ಕ್ರೇಜ್ ಹುಟ್ಟಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿನ ಸಿಗ್ನೇಚರ್ ಸ್ಟೆಪ್ ಸಖತ್ ಟ್ರೆಂಡ್ ಆಗಿದೆ. ಇದೀಗ ಈ ಹಾಡಿಗೆ ಪುಟ್ಟ ಬಾಲಕಿ ಸ್ಟೆಪ್ ಹಾಕಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ. ಈ ಬಾಲಕಿಯ ಡ್ಯಾನ್ಸ್‌ಗೆ ನ್ಯಾಶನಲ್ ಕ್ರಶ್ ರಶ್ಮಿಕಾ ಮನಸೋತಿದ್ದಾರೆ.
ಈ ವಿಡಿಯೋ ನೋಡಿದ್ರೆ ರಿಹರ್ಸಲ್ ವೇಳೆ ಶಾಲೆಯೊಂದರಲ್ಲಿ ವಿಡಿಯೋ ತೆಗೆದಂತಿದೆ. ಹೀಗೆ ಸಾಮಿ ಸಾಮಿ ಹಾಡಿಗೆ ಸಲೀಸಾಗಿ ಶಾಲಾ ಮಕ್ಕಳು ಕುಣಿದು ಕುಪ್ಪಳಿಸಿದ್ದಾಳೆ. ಇನ್ನು ವೈರಲ್ ಆದ ಈ ವಿಡಿಯೋ ಗಮಸಿದ ನಟಿ ರಶ್ಮಿಕಾ ಮಂದಣ್ಣ ಬಾಲಕಿ ಡ್ಯಾನ್ಸ್‌ಗೆ ಫಿದಾ ಆಗಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿರುವ ರಶ್ಮಿಕಾ, ನಾನು ಈ ಬಾಲಕಿಯನ್ನು ಭೇಟಿಯಾಗಬೇಕು. ನಾನು ಹೇಗೆ ಆಕೆಯನ್ನು ಭೇಟಿಯಾಗಬಹುದು? ಎಂದು ಟ್ವೀಟ್ ಮೂಲಕ ಪ್ರಶ್ನೆ ಕೇಳಿದ್ದಾರೆ. ಈ ವಿಡಿಯೋದಲ್ಲಿ ಶಾಲಾ ಮಕ್ಕಳು ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಬಹುದು. ಇನ್ನು ಬಾಲಕಿ ಡ್ಯಾನ್ಸ್‌ಗೆ ನೆಟ್ಟಿಗರು ಸಕತ್ ಕಾಮೆಂಟ್ ಹಾಕಿದ್ದಾರೆ.
PublicNext
14/09/2022 08:28 pm