ತಿರುವನಂತಪುರ: ಮಲಯಾಳಂ ಚಿತ್ರರಂಗದ ನಿರ್ದೇಶಕ ಅಲಿ ಅಕ್ಬರ್ ಹಾಗೂ ಅವರ ಪತ್ನಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಲಿ ಅಕ್ಬರ್ ತಾವು ಹಿಂದೂ ಧರ್ಮಕ್ಕೆ ಕನ್ವರ್ಟ್ ಆಗುವುದಾಗಿ ಹೇಳಿಕೊಂಡಿದ್ದರು. ಅದರಂತೇ ಇದೀಗ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಈ ವಿಚಾರವನ್ನು ಹಿಂದೂ ಸೇವಾ ಕೇಂದ್ರದ ಸ್ಥಾಪಕ ಪ್ರತೀಶ್ ವಿಶ್ವನಾಥ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲಿ ಅಕ್ಬರ್ ಅವರು ಪೂಜೆ, ಹೋಮ ಮಾಡುವ ಫೋಟೋಗಳನ್ನು ಶೇರ್ ಮಾಡಿ, "ಇತಿಹಾಸ ಈಗ ತಾನಾಗಿಯೇ ಮರುಕಳಿಸುತ್ತಿದೆ. ಅಲಿ ಅಕ್ಬರ್ ಈಗ ರಾಮಸಿಂಹನ್" ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಹಿಂದೂ ಧರ್ಮಕ್ಕೆ ಕನ್ವರ್ಟ್ ಆದ ನಂತರ ಅಲಿ ಅಕ್ಬರ್ ಅವರು ತಮ್ಮ ಹೆಸರನ್ನು ರಾಮಸಿಂಹನ್ ಎಂದು ಬದಲಾಯಿಸಿಕೊಂಡಿದ್ದಾರೆ.
PublicNext
16/01/2022 12:04 pm