ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂಸೆಯ ಸಂಭ್ರಮಕ್ಕೆ ಶತಮಾನದ ನೆಲದ ಪದ ದುರ್ಬಳಕೆ ಸರಿಯೇ?

ಚಾಮರಾಜನಗರ: ತಣ್ಣಗೆ ಪ್ರದರ್ಶನ ಕಾಣುತ್ತಿರುವ 'ಗರುಡ ಗಮನ ವೃಷಭ ವಾಹನ' ಚಿತ್ರಕ್ಕೆ ಈಗ ವಿವಾದದ ಕಿಡಿ ಹತ್ತಿಕೊಂಡಿದೆ. ಚಿತ್ರದಲ್ಲಿನ ಕೊಲೆ ದೃಶ್ಯ ಮುಗಿದ ಮೇಲೆ ಮುಖ್ಯ ಪಾತ್ರಧಾರಿ ಅದನ್ನು ಸಂಭ್ರಮಿಸುವಾಗ ಸೋಜಿಗದ ಸೂಜು ಮಲ್ಲಿಗೆ ಎಂಬ ಹಾಡು ಬರುತ್ತದೆ. ಹಿಂಸೆಯ ಸಂಭ್ರಮಕ್ಕೆ ಶತಮಾನದ ಜನಪದ ಹಾಡನ್ನು ಬಳಸಿದ್ದೇಕೆ? ಎಂದು ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅಸಮಾಧಾನಿತರಾಗಿದ್ದಾರೆ.

ಮಲೆ ಮಹದೇಶ್ವರರು ಓರ್ವ ಪವಾಡ ಪುರುಷ. ಮಹದೇಶ್ವರರು ನೈಜ ವ್ಯಕ್ತಿಯಾಗಿದ್ದು ದೈವತ್ವವನ್ನು ಪಡೆದವರು. ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ, ಅವರು ಸಕಲ ಜೀವಿಗಳಿಗೂ ಒಳ್ಳೇಯದನ್ನೇ ಬಯಸಿ ಅಲ್ಪರಿಗೆ ಜ್ಞಾನ ನೀಡುವಂತ ಮಹಾಮಹಿಮರ ಬಗ್ಗೆ ಇರುವ ಹಾಡನ್ನು ಕ್ರೌರ್ಯಕ್ಕೆ ಬಳಸಿರುವ ನಿರ್ದೇಶಕರನ್ನು ಮಹದೇಶ್ವರರೇ ಹರಸಬೇಕಿದೆ, ಮುಂದೆ ಈ ರೀತಿಯ ಚಿಂತನೆ ಬಾರದಿರಲಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

Edited By : Nagaraj Tulugeri
PublicNext

PublicNext

03/12/2021 08:43 am

Cinque Terre

33.82 K

Cinque Terre

0