ಬೆಂಗಳೂರು: ಡ್ರಗ್ ಪೆಡ್ಲರ್ ಆರೋಪ ಹೊತ್ತು ಜೈಲಿಗೂ ಹೋಗಿ ಬಂದು ಈಗಷ್ಟೇ ರಿಲೀಫ್ ಆಗುತ್ತಿರುವ 'ಮಾದಕ' ನಟಿ ಸಂಜನಾ ಗಲ್ರಾನಿ ಈಗ ದುರ್ಗಾ ಮಾತೆಯ ವೇಷದಲ್ಲಿ ಮಿರಿ ಮಿರಿ ಮಿಂಚುತ್ತಿದ್ದಾರೆ.
ಅವರು ಇಸ್ಲಾಂಗೆ ಮತಾಂತರ ಹೊಂದಿದ್ದಾರೆಂದು ಇದಕ್ಕೂ ಮುನ್ನ ಸುದ್ದಿಯಾಗಿತ್ತು. ದುರ್ಗಾ ವೇಷ ಧರಿಸಿ ಕ್ಯಾಮೆರಾ ಕಡೆ ಸಾಕ್ಷಾತ್ ದೇವತೆಯಂತೆ ಪೋಸ್ ಕೊಟ್ಟ ಸಂಜನಾ ಅದರ ದೃಶ್ಯವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದಷ್ಟೇ ಅಲ್ಲ. ಸಂಜನಾರನ್ನು ದೇವತೆ ಅವತಾರದಲ್ಲಿ ನೋಡಿದ ಇನ್ನೂ ಕೆಲ ಅಭಿಮಾನಿಗಳು ಕೈ ಮುಗಿಯುವ ಎಮೋಜಿ ಹಾಕುತ್ತಿದ್ದಾರೆ.
PublicNext
07/10/2021 09:29 pm