ಚೆನ್ನೈ: ದಕ್ಷಿಣ ಭಾರತದ ಖ್ಯಾತ ಯುವ ವಿಮರ್ಶಕ ಕೌಶಿಕ್ (35) ಹೃದಯಾಘಾತದಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ.ವಿಮರ್ಶಕ, ಯೂಟ್ಯೂಬರ್, ವಿಡಿಯೋ ಜಾಕಿ ಹಾಗೂ ಇಂಡಸ್ಟ್ರಿ ಜೊತೆ ತುಂಬಾ ಹತ್ತಿರದ ಸಂಬಂಧ ಹೊಂದಿದ್ದ ಕೌಶಿಕ್ ಅವರಿಗೆ ನಿನ್ನೆ ತಮ್ಮ ನಿವಾಸದಲ್ಲಿ ಹೃದಯಾಘಾತವಾಗಿದ್ದು, ನಿದ್ದೆ ಮಾಡುತ್ತಿದ್ದ ವೇಳೆಯಲ್ಲೇ ಅಸುನೀಗಿದ್ದಾರೆ.
ತಮಿಳು ಸಿನಿಮಾ ಜೀವಿ 2 ಸಿನಿಮಾ ಸುದ್ದಿಗೋಷ್ಠಿಗೆ ಆಗಮಿಸಬೇಕಿತ್ತು. ಆದರೆ ಸುದ್ದಿಗೋಷ್ಠಿಗೆ ಗೈರಾದ ಹಿನ್ನೆಲೆಯಲ್ಲಿ ಸ್ನೇಹಿತರು ಆತನಿಗೆ ಕಾಲ್ ಮಾಡಿದ್ದು, ಈ ವೇಳೆ ಕರೆಗೆ ಪ್ರತಿಕ್ರಿಯೆ ನೀಡದ ಸಂದರ್ಭದಲ್ಲಿ ರೂಮ್ ಗೆ ತೆರಳಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.
ಇಂಜಿನಿಯರಿಂಗ್ ಪದವಿ ಪಡೆದಿದ್ದ ಕೌಶಿಕ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದರು. ಕೌಶಿಕ್ ನಿಧನಕ್ಕೆ ಕೀರ್ತಿ ಸುರೇಶ್, ಕಾರ್ತಿ, ಬಾಲಾಜಿ ಮೋಹನ್, ವೆಂಕಟ್ ಪ್ರಭು, ರಿತಿಕಾ ಸಿಂಗ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.
ಧನ್ವೀರ್ ನಟನೆಯ ವಾಮನ ಸಿನಿಮಾದ ಅಪ್ ಡೇಟ್ ಕೂಡ ಟ್ವಿಟರ್ ನಲ್ಲಿ ಶೇರ್ ಮಾಡಿದ್ದರು. ಮಂಸೋರೆ ನಿರ್ದೇಶನದ ಹೊಸ ಸಿನಿಮಾವನ್ನು ಪ್ರಮೋಟ್ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳ ಬಗ್ಗೆಯೂ ಹೆಚ್ಚು ಪ್ರಮೋಟ್ ಮಾಡ್ತಿದ್ದ ಕೌಶಿಕ್ ಹಠಾತ್ ನಿಧನದಿಂದ ದಕ್ಷಿಣ ಚಿತ್ರರಂಗ ಆಘಾತಕ್ಕೊಳಗಾಗಿದೆ.
PublicNext
16/08/2022 02:28 pm