'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಸದ್ಯ ಎಲ್ಲಾ ಕಡೆ ಟ್ರೆಂಡ್ ಶುರು ಮಾಡಿದೆ. ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆಟೋ ಚಾಲಕನೊಬ್ಬ ತನ್ನ ಪ್ಯಾಸೆಂಜರ್‌ಗಳಿಗೆ ಥಿಯೇಟರ್ ಬಳಿ ಡ್ರಾಪ್ ಮಾಡುತ್ತಾನೆ. ಆಗ ಆಟೋದಿಂದ ಇಳಿದ ಮಹಿಳಾಮಣಿಗಳು ಆಟೋ ಚಾಲಕನಿಗೆ ಪ್ರಯಾಣಿಸಿದ ಹಣ ನೀಡಲು ಮುಂದಾಗುತ್ತಾರೆ. ಈ ವೇಳೆ ಆಟೋ ಚಾಲಕ ನೀವು ಕಾಶ್ಮೀರ್ ಫೈಲ್ಸ್ ನೋಡಲು ಬಂದ್ದಿದ್ದೀರಾ ಎಂದು ಪ್ರಶ್ನೆ ಮಾಡುತ್ತಾನೆ. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆಯರು ಹೌದು ಎನ್ನುತ್ತಾರೆ. ಆಗ ಆಟೋ ಚಾಲಕ ನನಗೆ ಹಣ ಬೇಡ. ಈ ದೇಶದ ಪ್ರತಿಯೊಬ್ಬ ಹಿಂದೂ ಕಾಶ್ಮೀರ್ ಫೈಲ್ಸ್ ನೋಡಬೇಕು ಎಂದು ಉತ್ತರಿಸಿದ್ದಾನೆ.
PublicNext
22/03/2022 11:45 am